ಮಲಗು ಮಲಗೆನ್ನ ಸಿಹಿ ಮುದ್ದು ಕಂದ
ಆ ನಗುಮೊಗವ ನೋಟವು ಎಂಥ ಆನಂದ
ಕಾಲ ಹೆಬ್ಬೆಟ್ಟನು ಹಿಡಿದೆತ್ತಿ ಬಾಯೊಳಗೆ ಇಟ್ಟು
ಕಷ್ಟ ವಿಲ್ಲದೆ ಸವಿವ ಸವಿ ನಿನಗೆ ಎಷ್ಟು ಅಂದ
ಕೃಷ್ಣ ನೀ ಎಂಬಂತೆ ತೋರುತಿದೆ ಈ ರೂಪ
ಕ್ಷಣವೋ ತಪ್ಪಿಸಲಾರೆ ನೋಡುಲು ನಿನ್ನಾರವಿಂದ ೧
ಕಡಗೋಲು ಅಡಗೋಲು ಆಟಕೆ ಕೊಡುವೆನು
ಕಾಲ ಕಳೆಯದೆ ಮಲಗು ನೋಡು ಗುಮ್ಮ ಬಂದ
ಕಟ್ಟಿದ ತೊಟ್ಟಿಲು ತೂಗಿ ಕೈ ಸೋಲುತಿದೆ
ಕಾಟ ಕೊಡಡಿರೋ ಮಗುವೆ ನೀನಲ್ಲವೇ ಕಂದ 2
ಕೈ ಎರೆಡು ತೋರುತ ಕಾಲುಗಳು ಮೇಲೆತ್ತಿ
ಕಣ್ಣು ಹೊರಳಿಸಿ ಆಕಾಶ ನೋಡುವುದೇ ಚಂದ
ಕಣ್ಣುತಪ್ಪಿಸಿ ಮಲಗಿದಂತೆ ಮುಖ ಮಾಡಿ ಎದ್ದು
ಕೂರುವ ಈ ನಟನೆಯ ನೀ ಕಲಿತೆ ಯಾರಿಂದ 3
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ