ಮಂಗಳವಾರ, ಸೆಪ್ಟೆಂಬರ್ 27, 2011

ಎಳೆಯೋಣ ಬಾ

ಮರಭೂಮಿಯಲ್ಲಿ ಕಂಡ ನೀರಿನ ಒರತೆಯಂತೆ
ಬಂಜರು ನಾಡಲ್ಲಿ ಸಿಕ್ಕ ಗುಲಾಬಿ ಹೂ ಅಂತೆ
, ತೂಫಾನಿನಲಿ ಸಾಗುತಿರುವ ಹಡಗಿನಂತೆ ,
ಕತ್ತಲಲಿ ಬೆಳಗುವಾ ಬಾ ನಲ್ಲೇ ನಂದಾ ದೀಪದಂತೆ , 1

ನಡೆಯುತಿದ್ದ ದಾರಿಯಲಿ ಬಂದೆ ನೀ ಮಿಂಚಂತೆ
ನೀ ಕಂಡೆ ಹಸಿರುವನದಲ್ಲಿ ಹೊಸ ಚಿಲುಮೆಯಂತೆ
ಅರಿವಾಯಿತು ನನಗೆ ನೀ ನನಗಾಗಿ ಬಂದಂತೆ
ಇಷ್ಟು ದಿನ ಹುಡುಕಿದ್ದು ಜೀವನ ಸಾರ್ಥಕ ವಾದಂತೆ 2

ನೀ ಇದ್ದಾರೆ ಜೊತೆಯಲ್ಲಿ ಉಕ್ಕುತ್ತಿರುವ ಜಲಪಾತದಂತೆ ,
ಭೋರ್ಗರೆಯುತಿರು ಸದಾ ಪ್ರೀತಿಯೆಂಬ ಜೀವ ಜಲದಂತೆ,
ಸೂಸುತಿರುವೆ ಪ್ರೇಮದ ಮಧುರ ಅರಳಿದ ಹೂವಂತೆ
ಬೆಳಗುತಿರು ನಿರಂತರ ನನ್ನ ಜೀವನದಲಿ ಸೂರ್ಯನಂತೆ 3

ಹೀಗೆ ಎಂದೆಂದೂ ನನ್ನೊಟ್ಟಿಗೆ ನೀನಿರು ಹಾಲು ಜೀನಿನಂತೆ
ಕೈ ಹಿಡಿದು ನೆಡೆಸು ನನ್ನ ನೀ ಮುಗ್ಧ ಮಗುವಿನಂತೆ
ಸಾಗಬೇಕಿದೆ ನಾವಿಬ್ಬರು ಬಹು ದೂರ ವಿಮಾನದಂತೆ
ಜೀವನದ ತೇರನ್ನು ಎಳೆಯೋಣ ಬಾ ಕಂಡ ಕನಸಂತೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ