ಮಂಗಳವಾರ, ಫೆಬ್ರವರಿ 13, 2024

ಏನಿದೇನಿದು
ಸೂರ್ಯನುದಯವು
ಭುವಿಯಲಿ ಬಂಗಾರದ ಬಣ್ಣವು

ಮೊಡದೋಳಗಣ
ಮಂಜು ಸರಿಸಿ
ಕೊಡುವೆ ನಿತ್ಯ ಉಲ್ಲಾಸವು

ಜೀವ ಸಂಕುಲಕೆಲ್ಲ
ಚೇತನ ತುಂಬಿದೆ
ನಗುಮೊಗದ ನಿನ್ನ ನೋಟವು 

ಮರದ ಮರೆಯಲಿ
ನಿಂತು ನೀ ಆಡುವೆ
ಕಣ್ಣು ಮುಚ್ಚಾಲೆ ಆಟವು

ಆಟ ನೋಟದ ಮಧ್ಯ
ಸಾರುವೆ ಕಾಯಕವೇ ಕೈಲಾಸವು

ನಿತ್ಯ ಉದಯಿಸಿ ಮುಳುಗಿ ತಿಳಿಸುವೆ
ಇದುವೇ ಜೀವನದ ಪರಿ ಪಾಠವು

:ಪ್ರಭಂಜನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ