ನಿನ್ನ ಬದುಕು ನೋಡಿ
ನಾಚಬೇಕು ಬದುಕು
ಬದುಕಿಬಿಡು ಮನುಜ
ರಾಜ ಬದುಕಿದಂತೆ
ಬದುಕಿ, ಬದುಕಲು ಬಿಡು
ನೀ ಬದುಕಿದರೆ ಬದುಕು
ಬದುಕೇ ಬಂದು ಹೊಗಳಬೇಕು
ಬದುಕಿದರೆ ಹೀಗೆ ಬದುಕಬೇಕೆಂದು
ನಿತ್ಯದಾ ಬದುಕು (ಬದುಕು= ಕೆಲಸ - ಉ ಕರ್ನಾಟಕದಲ್ಲಿ ಪ್ರಯೋಗ ಇದೆ)
ಬದುಕಿಗೆ ದಾರಿಯಾಗಬೇಕು
ಬದುಕು ಮಾಡುತ್ತಲೇ ಇರು
ಬದುಕು ಬೆಳಕಾಗಿ ಬದುಕು ಮುಗಿಯುವವರೆಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ