ಮಂಗಳವಾರ, ಫೆಬ್ರವರಿ 13, 2024

ನೀ ಇರೋವರೆಗೂ

 ನೀ ಇರೋವರೆಗೂ 
 ಭಯವಿಲ್ಲ ನನಗೆ
ನೀ ಇರುವಾಗ
ಗುಂಡಿ ಬೇಕಿಲ್ಲ ಬಟ್ಟೆಗೆ

ಸೀರೆ ಉಡುವಾಗೆಲ್ಲ ನೀನಿರಲೇ ಬೇಕು
ನೀನಿಲ್ಲದೆ ಉಡಲಾರೆ ಆ ಉಡುಪು
ಆಪದ್ಭಾ೦ದವ ಹೋದಕಡೆಯಲ್ಲಾ   
ಅಳುಕಿಲ್ಲದೆ ಉಪಯೊಗಿಸದವರಿಲ್ಲ  - ಪಿನ್ನು 

ಸರ ಸರಿದು ಹೋದರು ಬರುವೆ ನೀನು
ಚಪ್ಪಲಿ ಕಿತ್ತರೂ ಹೇಳುವೆ ನಾನಿಲ್ಲವೇನು
ಚೀಲ ಸಾಮಾನು ಕಾಪಾಡುವೆ ನೀನು
ನಿನಗೆ ಸರಿ ಸಾಟಿ ಯಾರೂ ಇಲ್ಲವೇನೋ    

ನೀ ನಿಜವಾದ ಪಾಠಶಾಲೆ
ಬಾಗುವೆ ಯಾರೇ ಹೇಗೆ ಬಗ್ಗಿಸಿದರುನೂ
ಒಮ್ಮೊಮ್ಮೆ ಚ್ಚುಚಿ ನೋವುಮಾಡುವೆ ನೀನು
ಕ್ಷಮಿಸುವೆ ಉಪಯೋಯೋಗಿಸಿ ಬಿಸಾಡಿದರುನೂ 

-ಪ್ರಭಂಜನ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ