ಶುಕ್ರವಾರ, ಆಗಸ್ಟ್ 31, 2012

ಕಂಡೆ ನಿನ್ನನ

ಮೋಡಗಳ ಅಂಚಿನಲ್ಲಿ ಕಂಡೆ ನಿನ್ನನ
ಹೇಗೆ ಹೇಳಲಿ ಅದನು ನಾ ಹಾಡಾಗಿ

ನಿನ್ನ ರೂಪಕ್ಕೆ ಮನಸಾಗಿ
ಸೋಕಿದೆ ಮಂಜು ಮೃದುವಾಗಿ
ದುಂಡು ಮೊಗದ ನೋಟಕ್ಕೆ
ನಿಂತಿವೆ ತರುಲತೆಗಳು ಬೆರಗಾಗಿ

ಹೊಳಪಿನ ಕೂದಲು ಹಾರುತಿವೆ
ಬೀಸುವ ತಂಗಾಳಿಗೆ ನವಿರಾಗಿ
ಚಿಕ್ಕ ಚೊಕ್ಕ ತುಟಿಗಳು ಮಿನುಗುತಿವೆ
ಅರಳಿದ ಕೆಂಗುಲಾಬಿ ಹೂವಾಗಿ

ಪಿಸುಮಾತಿನ ಆ ಮದುರಕ್ಕೆ
ಬಡಿಯುತಿದೆ ಹೃದಯ ಜೋರಾಗಿ
ನೀಳವಾದ ತೊಳ್ಬೇರೆಳುಗಳು
ಹೊಳೆಯುತಿವೆ ಕೋಮಲವಾಗಿ

ತುಳುಕುತಿರುವ ಆ ನಡಿಗೆಗೆ
ಬಳುಕುತಿದೆ ಸೊಂಟ ಸೊಗಸಾಗಿ
ತಿದ್ದಿ ತೀಡಿದ ಈ ಮೈ ಮಾಟಕ್ಕೆ
ನಾ ಬರೆದೆ ಕವಿತೆ ಕವಿಯಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ