ನೀ ಇಲ್ಲೇ ಇರುವೆ ಎಂದು
ನನಗೀಗ ಅನಿಸುತಿದೆ
ನಾ ಎಲ್ಲೇ ಹೋದರು ಇಂದು
ನಿನ್ನ ನೆರಳೇ ಕಾಣುತಿಹೆ
ತುಂತುರು ಮಳೆ ಬಿಸಿಲಿನಲಿ
ತುಂಟಾಟ ಆಡುತಿದೆ
ನಿನ್ನ ಪ್ರೀತಿಯ ಸಿಂಚನದಲ್ಲಿ
ಕನಸೊಂದು ಬೀಳುತಿದೆ
ಉಲ್ಲಾಸದ ಛಳಿಯ ತಂಗಾಳಿಯಲಿ
ನನ್ನ ಮನಸು ಹಾರಾದುತಿದೆ
ನಿನ್ನ ಒಲವನು ಇಲ್ಲಿಯೂ ಬಯಸುತಲಿ
ಹಾಡೊಂದನು ಗುನುಗುತಿಹೆ
ನಿನ್ನ ನೆನೆಯುತ ಗೀಚಿದ ಕವನವನು
ಓದುತ ಮಲಗಿರುವೆ
ಮಲಗಿದ ಮಂಚವು ನಲಿಯುತಲಿ
ನಿದಿರೆಯ ಓಡಿಸುತಲಿದೆ
ಅಂದದ ನಿನ್ನಯ ಮೊಗವು
ಚಂದಿರನ ಹೋಲುತಿದೆ
ಮಂದ ಬೆಳಕಲ್ಲಿ ಮುಂಚುವ ನೀ
ಬಂದು ಬಳಕುತ್ತಾ ನನ್ನನು ಸೇರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ