ಶುಕ್ರವಾರ, ಜನವರಿ 6, 2012

ವರುಷದ ಹಿಂದೆ

ಇಂದಿಗೆ ವರುಷದ ಹಿಂದೆ ... ಕಲ್ಯಾಣ ಮಂಟಪದಿ
ಬೀಸು ತಂಗಾಳಿ ನಮ್ಹೆಸರು ಹೊತ್ತು ತಂತು 

ಸಡಗರದಿ ಓಡಾಡಿ ಹರುಷದಿ ನಲಿದಾಡಿ
ಅರಿಶಿನ ಕುಂಕುಮ ಬಳೆ  ಜ್ಹಲ್ ಎಂದಿತು ..
 
ತಳಿರು ತೋರಣ ಹೂ ತುಂಬಿದ ಹಂದರ
ಕೆಳಗೆ ಓಲಗ  ವಾದ್ಯಗಳು  ನುಡಿಯುತಿತ್ತು 

ಪೀಪಿ ಕೇಕೆ  ಸಂಭ್ರಮದಿ ನಲಿಯುವ ಚಿಣ್ಣರ
ಉಲ್ಲಾಸದ ಕಲರವ ಮುಗಿಲು  ಮುಟ್ಟುತಿತ್ತು

ಕಾಶಿ ಯಾತ್ರೆಗೆ ತೆರಳಿ ಕುಣಿಯುತ ಒಳಬಂದು
ತಾಳಿಕಟ್ಟುಕ್ಕೆ   ಸರಿಯಾಗಿ  ಹನ್ನೊಂದಾಯಿತು  

ಲಾಜ ಹೋಮ ನಂತರ  ಮಗುವ ತೊಟ್ಟಿಲಲ್ಲಿ ಹಾಕಿ
ಹೆಸರಿಟ್ಟು  ಮನೆ  ತುಂಬಿಸಿ  ಕೊಂಡಿದ್ದಾಯಿತು  

ಕಾಣದ ನಕ್ಷತ್ರ ತೋರುಸಿ ಹೊಸ ಹೆಸರನ್ನೇ  ಇಟ್ಟು
ಸಂಜೆ ಗೋಧೂಳಿಯಲಿ ಸೇರು ವದಸಿದ್ದಾಯಿತು
  
ವಯಾರದ ಬಟ್ಟೆ ಧರಿಸಿ ಗೆಳೆಯರಿಗೆ ಮುಗುಳ್ನಗೆ ಸೂಸಿ
ಆರತೆ ಅಕ್ಷತೆ ಮುಗಿದಾಗ ರಾತ್ರಿ ಹನ್ನೊಂದಾಯಿತು 
 
ವರುಷ ಕಳೆದು ಹೋಯಿತು ಎಂದು 
ಹರುಷ ಇರಲಿ ಇನ್ನು ಮುಂದು, ಎಂದೆಂದು
ಹರಸಿ ನೀವು ನಮಗೆ ಇಂದು ಬಂದು  :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ