ಶನಿವಾರ, ಡಿಸೆಂಬರ್ 15, 2012

ಹಿಮದ ಮಳೆ

ಸುರಿಯುತಿದೆ ಹಿಮದ ಮಳೆ
ಹೆಪ್ಪು ಗಟ್ಟಿದ   ಹುಚ್ಚು ಹೊಳೆ
ಎಲ್ಲಿ ನೋಡಿದರು ಬೆಳುಪು ಚಂದಿರನ ನೆಲದಂತೆ
ಹತ್ತು ದಿಕ್ಕಲು ಹಾಲು ಹನಿ ಹನಿಯಾಗಿ  ಸುರಿದಂತೆ
ದೇವ ಲೋಕವೇ ಧರೆಗೆ ಇಳಿದಂತೆ

ಹಗಲಿಲ್ಲ ಇರುಲಿಲ್ಲ
ಸೂರ್ಯ ಕಾಣುವುದೇಇಲ್ಲ
ಎಲ್ಲಿ ನೋಡಿದರು ಮೌನವೇ ತುಂಬಿದಾ ಮನೆಯಂತೆ 
ಹತ್ತು ದಿಕ್ಕಲು ಬೆಟ್ಟ ನಿಂತಿವೆ ಮೂಕ ಪ್ರೆಕ್ಷಕರಂತೆ
ಸದ್ದಿಲ್ಲದಾ  ಲೋಕ ಧರೆಗೆ ಇಳಿದಂತೆ

ಗುಡುಗಿನ ಸುಳಿವಿಲ್ಲ
ಮಿಂಚು ಮೂಡುವುದಿಲ್ಲ
ಎಲ್ಲಿ ನೋಡಿದರು ತೇಲುತಿವೆ ಮೋಡಗಳು ಹತ್ತಿಯಂತೆ
ಹತ್ತು ದಿಕ್ಕಲು ಚಳಿಯು ತೋರಿ ಹಾರಿ ಬಂದಂತೆ
ಪ್ರೇಮ ಲೋಕವೆ ಧರೆಗೆ ಇಳಿದಂತೆ

1 ಕಾಮೆಂಟ್‌:

  1. ಅದೆಲ್ಲ ಸರಿ, ಪ್ರೇಮಲೋಕದ ಅಸಲೀ ನಾಯಕಿಯಾರು ತಿಳಿಸಿದ್ದರೆ ಪಸಂದಾಗಿರುತ್ತಿತ್ತು.
    ಮೂಳೆಗಳಾಳಕ್ಕೂ ಚಳಿ ನುಗಿಸುವ ಅಹೋ ರಾತ್ರಿ ಮಳೆ ಪರಿಣಾಮ ಸಮರ್ಥವಾಗಿ ಮೂಡಿಬಂದಿದೆ.
    (& thanks for your link)

    ಪ್ರತ್ಯುತ್ತರಅಳಿಸಿ