ಸುರಿಯುತಿದೆ ಹಿಮದ ಮಳೆ
ಹೆಪ್ಪು ಗಟ್ಟಿದ ಹುಚ್ಚು ಹೊಳೆ
ಎಲ್ಲಿ ನೋಡಿದರು ಬೆಳುಪು ಚಂದಿರನ ನೆಲದಂತೆ
ಹತ್ತು ದಿಕ್ಕಲು ಹಾಲು ಹನಿ ಹನಿಯಾಗಿ ಸುರಿದಂತೆ
ದೇವ ಲೋಕವೇ ಧರೆಗೆ ಇಳಿದಂತೆ
ಹಗಲಿಲ್ಲ ಇರುಲಿಲ್ಲ
ಸೂರ್ಯ ಕಾಣುವುದೇಇಲ್ಲ
ಎಲ್ಲಿ ನೋಡಿದರು ಮೌನವೇ ತುಂಬಿದಾ ಮನೆಯಂತೆ
ಹತ್ತು ದಿಕ್ಕಲು ಬೆಟ್ಟ ನಿಂತಿವೆ ಮೂಕ ಪ್ರೆಕ್ಷಕರಂತೆ
ಸದ್ದಿಲ್ಲದಾ ಲೋಕ ಧರೆಗೆ ಇಳಿದಂತೆ
ಗುಡುಗಿನ ಸುಳಿವಿಲ್ಲ
ಮಿಂಚು ಮೂಡುವುದಿಲ್ಲ
ಎಲ್ಲಿ ನೋಡಿದರು ತೇಲುತಿವೆ ಮೋಡಗಳು ಹತ್ತಿಯಂತೆ
ಹತ್ತು ದಿಕ್ಕಲು ಚಳಿಯು ತೋರಿ ಹಾರಿ ಬಂದಂತೆ
ಪ್ರೇಮ ಲೋಕವೆ ಧರೆಗೆ ಇಳಿದಂತೆ
ಹೆಪ್ಪು ಗಟ್ಟಿದ ಹುಚ್ಚು ಹೊಳೆ
ಎಲ್ಲಿ ನೋಡಿದರು ಬೆಳುಪು ಚಂದಿರನ ನೆಲದಂತೆ
ಹತ್ತು ದಿಕ್ಕಲು ಹಾಲು ಹನಿ ಹನಿಯಾಗಿ ಸುರಿದಂತೆ
ದೇವ ಲೋಕವೇ ಧರೆಗೆ ಇಳಿದಂತೆ
ಹಗಲಿಲ್ಲ ಇರುಲಿಲ್ಲ
ಸೂರ್ಯ ಕಾಣುವುದೇಇಲ್ಲ
ಎಲ್ಲಿ ನೋಡಿದರು ಮೌನವೇ ತುಂಬಿದಾ ಮನೆಯಂತೆ
ಹತ್ತು ದಿಕ್ಕಲು ಬೆಟ್ಟ ನಿಂತಿವೆ ಮೂಕ ಪ್ರೆಕ್ಷಕರಂತೆ
ಸದ್ದಿಲ್ಲದಾ ಲೋಕ ಧರೆಗೆ ಇಳಿದಂತೆ
ಗುಡುಗಿನ ಸುಳಿವಿಲ್ಲ
ಮಿಂಚು ಮೂಡುವುದಿಲ್ಲ
ಎಲ್ಲಿ ನೋಡಿದರು ತೇಲುತಿವೆ ಮೋಡಗಳು ಹತ್ತಿಯಂತೆ
ಹತ್ತು ದಿಕ್ಕಲು ಚಳಿಯು ತೋರಿ ಹಾರಿ ಬಂದಂತೆ
ಪ್ರೇಮ ಲೋಕವೆ ಧರೆಗೆ ಇಳಿದಂತೆ