ಗುರುವಾರ, ಫೆಬ್ರವರಿ 13, 2025
*ಕೋಕಿಲ* ಗಝಲ್..
ಪಂಚಮ ಸ್ವರದಲ್ಲಿ ಹಾಡು ಹಾಡುವೆ ಏಕೆ ಮಾವಿನ ಚಿಗುರು ಅದು ಒಗರಿರಲು ಸಾಕೆ
ಎಲೆಗಳೊಳಗೆ ಇರುವೆ ಅದೆಂಥ ನಾಚಿಕೆ ನಿನಗೆ
ನಿನ್ನನಾದರಿಸಿದರೂ ಕಣ್ಣು ಕೆಂಪಾಗಿರುವುದೇಕೆ
ಬಣ್ಣ ಕಪ್ಪಾದರು ತತ್ತಿ ಬೆಳಿ ಗಾತ್ರ ಒಂದೇ ಪರರ ಗೂಡಲ್ಲಿ ಇಡುವೆ ಈ ಮೋಸವೇಕೆ
ಪರಪುಟ್ಟನಾದರೂ ತಾಯಿ ಹುಡುಕುವೆ ಹೇಗೆ ಕಾ ಕಾ ಕಲಿಯದೆ ಕುಹೂ ಕುಹೂ ಕೂಗುವೆಯೇಕೆ
ಕಾವುಕೊಟ್ಟರು ಕಾಗೆಗೆ ಹುಡುಕಿ ಕುಕ್ಕುವೆಯೇಕೆ ಸಾಕು ನ್ಯಾಯಕ್ಕಾಗಿ 'ಪ್ರಮು'ಖಗೆ ಒಪ್ಪಿಸಬೇಕೇ
-ಪ್ರಭಂಜನ.
ಪಂಚಮಿ
ಪಂಚಮಿ
ಬನ್ನಿರೇ ಭಾಮೆಂಗಳೆಲ್ಲಾ
ತನಿ ಎರೆಯುವ ನಾಗರಾಜಗೆ
ಹೊನ್ನ ಒಡವೆಯ ಹಾಕಿಕೊಂಡು
ಚನ್ನಾಗಿ ಶೃಂಗರಿಸಿ ಕೊಳ್ಳುತಾ
ಅರಿಶಿನ ಕುಂಕುಮ ಹಣ್ಣು ಹೂವು
ಕರದಿ ವೈಯಾರದಿ ನೆಡೆಯುತಾ
ಹುರಿದ ಕಡಲೆ ತಂಬಿಟ್ಟು ಚಿಗುಳಿ
ತೆರೆದು ನೈವೇದ್ಯ ಮಾಡುತಾ
ಪನ್ನಗನನ್ನು ಪ್ರಸನ್ನಗೊಳಿಸಿ
ಕನ್ನೆಯರು ವರಗಳ ಕೇಳುತಾ
ಬೆನ್ನಹುರಿಗೆ ಹಾಲ ಹಚ್ಚುತಾ
ಅಣ್ಣ ತಮ್ಮಗೆ ಆಯಸ್ಸು ಬೇಡುತಾ
-ಪ್ರಭಂಜನ.
ತಿಂಡಿ ಕವನ
ಇಡ್ಲಿಯಾದರೇನು ಶಿವ
ವಡೆಯಾದರೇನು ಶಿವ
ಪುರಿ ಸಾಗುವು ರುಚಿಯೇ ಶಿವ
ತಿಂದಮೇಲೆ ಎಲ್ಲಾ ಶಿವಮಯ
ಮಸಾಲೆ ದೋಸೆಗೆ ಬೆಣ್ಣೆಯನ್ನೇ ಸವರಿ
ಕೊಬ್ರಿ ಚಟ್ನಿಯ ಜೊತೆ ತಿಂದರೆ, ಬಾಯಲ್ಲಿ
ನೀರೂರಿ ಮನಸು ಅರಳದೇ
ಬಿಸಿ ಬಿಸಿ ಬೋಂಡವನ್ನು ಸಾಂಬಾರಿನಲ್ಲಿ ಅದ್ದಿ
ಸಂಬಾರ ಹೀರುತಾ ತಿಂದರೆ ಖುಷಿಯಲ್ಲಿ
ಸ್ವರ್ಗವೇ ಧರೆಗೆ ಇಳಿಯದೇ
ಉಪ್ಪಿಟ್ಟು ಕೇಸರಿಭಾತು ಚಿತ್ರಾನ್ನವೇ ಇರಲು
ತಿಂಡಿ ಹೊಟ್ಟೆ ತುಂಬದೇ ಇರುವುದೇ ನಮ್ಮಲ್ಲಿ
ನಾಲಿಗೆ ರುಚಿಗೆ ಏನು ಸಾಟಿಯೇ
ಕಾಫಿ ಟೀ ಜೊತೆಯಿರಲು, ಬಿಸಿ ನಾಲಿಗೆ ಸುಡಲು
ಹರಟಲು ಜೊತೆ ಗೆಳೆಯರಿರಲು, ಅಲ್ಲಲ್ಲಿ
ಹೃದಯ ನಿತ್ಯ ಕುಣಿಯದೇ,
ನಮ್ಮ ತಿಂಡಿಗೆ ಮಾರು ಹೋಗದವರು ಸಿಗುವರೇ
-ಪ್ರಭಂಜನ.
ನಮ್ಮದು ಒಂದು ತೊಗೊಳ್ಳಿ :) ತಿಂಡಿ ಕವನ
ತ್ಯಾಗ ಅಮರವೇ ಪ್ರೀತಿಲಿ
*ಚಂದದ ಬೆಡಗಿ* *ಈ ಹುಡುಗಿ*
ನಿನ್ನ ನೋಟವೇನುಕೆನೆಹಾಲಿನ ಮೈ ಮಾಟವೇನು
ತುಟಿಯ ಮೇಲೆ ಜೇನು
ನೋಡಿದರೆ, ಹೃದಯ ಮಿಟದೇನು
ನಗುವು ಸೊಗಸು ಸುಂದರಿ
ಆಕರ್ಶಿಸುವೆ ಯಾಕೆ ಈ ಪರಿ
ವರುಷಗಳು ಕಳೆದುಹೋದರೂ
ನಿನ್ನೊಲವು ಈಗಲೂ ಮಾದರಿ
ಬೆಡಗಿ ಕೇಶರಾಶಿಯೊಳಗೂ
ಮಿಂಚಿದೆ ನಿನ್ನ ಮೊಗದ ಚೆಲುವು
ಹುಡುಗಿ ಕೆನ್ನೆ ಕೆನ್ನೆ ಯೊಳಗೂ
ಬೆಣ್ಣೆ ಬೆಣ್ಣೆ ಕೊಡಲೇ ಕಾವು
ಚೆಲುವು ಎಷ್ಟು ಹೊಗಳಲಿ
ಪದಗಳೇ ಇಲ್ಲ ನನ್ನಾ ಬಳಿ
ಸ್ನೇಹ ನಿತ್ಯ ನೂತನವಾಗಲಿ
ತ್ಯಾಗ ಅಮರವೇ ಪ್ರೀತಿಲಿ
-ಪ್ರಭಂಜನ
ನನ್ನ ಒಲವೇ
ಕನಸೊಂದು ಬಿದ್ದಿತ್ತು
ಹೂವೊಂದು ನಗುತಿತ್ತು
ವರ್ಣಿಸಲಿ ಹೇಗೆ ನಿನ್ನ ಚಲುವೆ
ತಂಗಾಳಿ ಬಿಸಿತ್ತು
ಮೋಡಗಳು ತೇಲುತಿತ್ತು
ಚಂದಿರನಂತೆ ಬಂದೆ ನನ್ನ ಒಲವೇ
ಮುಂಗುರುಳು ಬಾಗಿತ್ತು
ಕೆಂದುಟಿ ಮಿಂಚುತಿತ್ತು
ದಾಳಿಂಬೆಯಂತೆ ದಂತ ನಿನ್ನ ನಗುವೇ
ಕಣ್ಣು ಹೊಳೆಯುತ್ತಿತ್ತು
ನಡು ಸಣ್ಣ ಬಳುಕುತಿತ್ತು
ಬಳ್ಳಿಯಂತೆ ನೀ ನನ್ನ ನವಿಲೇ
ಮೆತ್ತನೆಯ ಪಾದವಿತ್ತು
ಹೆಜ್ಜೆ ಮೇಲೆ ಹೆಜ್ಜೆ ಇತ್ತು
ಜಿಂಕೆಯಂತೆ ನಾಚಿ ನಿನ್ನ ನಡುಗೆ
ಸಾವಿರದ ಕನಸಿತ್ತು
ಹೃದಯ ಕುಣಿಯುತಲಿತ್ತು
ಪ್ರೀತಿತುಂಬಿ ಬಂದೆ ನೀ ನನ್ನ ಕಡೆಗೆ
-ಪ್ರಭಂಜನ.
ಕಣ್ಣಲಿ ಏನೋ ಮಿನುಗಿದಹಾಗೆ
ಕಣ್ಣಲಿ ಏನೋ ಮಿನುಗಿದಹಾಗೆ
ತಾರೆಯೇ ಧರೆಗೆ ಇಳಿದಂತಿದೆ
ಆ ನಗುವಲಿ ಏನೋ ಸೆಳೆತವಿದೆ
ಪ್ರೀತಿಯ ನುಡಿಯೇ ಮಧುರವಾಗಿ
ದುಂಬಿಯು ಹಾಡಿದಂತೆ ಕೇಳುತಿದೆ
ಹೆಜ್ಜೆಯ ಮೇಲೆ ಹೆಜ್ಜೆಯನಿಡುವ
ಮೃದು ಪಾದಗಳ ಸೊಬಗ ವರ್ಣಿಸಲೇ
ತರು ಲತೆ ಯಂತೆ ಬಳಕುವೆ ನಿನ್ನ
ಗಾಳಿಯು ಸೋಕಿ ನಾ ನಲಿದಾಡಿದೆ
ನವಿಲಿನ ಹಾಗೆ ನೆಡೆಯುವೆ ನಿನ್ನ
ನಡುಗೆಗೆ ಹೋಲಿಕೆ ಬೇರೇನಿದೆ
ಮನಸಿನ ತುಂಬಾ ಅವರಿಸಿರುವೆ
ನಿನ್ನ ನೋಡದೆ ಹೇಗೆ ಜೀವಿಸಲೇ
ಸಾಗರದಂಚಲಿ ಕಾಯುವೆ ನಾನು
ಚಂದಿರನಂತೆ ಬಾ ನನ್ನೊಲವೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)