ಮಲಗಿದ ಮಂಚದಲಿ
ತಣ್ಣನೆಯ ಗಾಳಿಯಲಿ
ಹಳೆಯ ನೆನಪಿನ ಕನಸೊಂದ ಬಿತ್ತು
ಕಾಲ ಚಕ್ರದಲಿ
ಹಿಂದೆ ನಾ ಮಲಗಿದ್ದ
ಮರದ ದಿಂಬು ಗಾಲಿ ಸರಪಳಿ ಇತ್ತು
ರಸ್ತೆ ಮಧ್ಯದಲಿ
ಅಂದು ಬಿದ್ದ ಕನಸಿನಲ್ಲಿ
ಹೊನ್ನು ಮಣ್ಣು ಹೆಣ್ಣಿನ ಸಂಗವಿತ್ತು
ಇಂದು ಅದೆಲ್ಲ ಇದೆ
ಆದರೂ ನಿದ್ದೆ ಬರದಾಗಿದೆ
ಹಣವಿಲ್ಲದ ಸಮಯವೇ ಸರಿಯಿತ್ತು
ಮೈ ಕೈ ನಡಗುತ್ತಾ
ಹೆದರಿ ಬೆವರು ಸುರಿಸುತ್ತಾ
ನಿದ್ದಇಂದ ದೇಹ ಉರುಳಿ ಬಿತ್ತು
ಬೆಳಸಬೇಕಿತ್ತು ಗುಣವನ್ನ
ಅಳಿಸಿ ಹಾಕಿ ಸ್ವಾರ್ಥವನ್ನ
ಜನರನ್ನ ನಾನು ಗಳಿಸಬೇಕಿತ್ತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ