ಹಣತಿ ಐತಿ ಇಲ್ಲಿ ಪ್ರಣತಿ ಐತಿ
ಹಳದಿ ಕೆಂಬಣ್ಣದ ಪ್ರಣತಿ ಐತಿ
ಹಳದಿ ಐತಿ ನೀಲಿ ಕೆಂಪು ಐತಿ
ಬಣ್ಣ ಸವರಿ ಬಳೆವ ಹೆಣ್ಣು ಐತಿ
ಕಷ್ಟ ಐತಿ ಇಲ್ಲಿ ಕನಸು ಐತಿ
ಸುಖ ಬರಬಹುದೆಂಬ ಆಶಾ ಐತಿ
ಕಲೆಯು ಐತಿ ಅಲ್ಲಿ ಬವಣೆ ಐತಿ
ಬದುಕಿಗೆ ಬಣ್ಣ ಹಚ್ಚುವ ಕಾಯಕ ಐತಿ
ಶಾಂತಿ ಐತಿ ಇಲ್ಲಿ ಕ್ರಾಂತಿ ಐತಿ
ಕನ್ನಡತನ ಸಾರುವ ಬಣ್ಣ ಐತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ