ಕಳೆದೆ ಹಲವರ ಜೊತೆ ಈ ಬಾಳ ಪಯಣದಲಿ
ಬಳಲಿದರೂ ಮಡದಿ ನಡೆದಳು ಕೊನೆಯವರೆಗೆ
ಹೇಳಲಾರೆ ಏನನ್ನು ಹಣಕ್ಕಾಗಿ ಜೊತೆಇದ್ದವರಿಗೆ
ಬಾಳದಾರಿಯಲ್ಲಿ ಇಂದು ಯಾರಿಲ್ಲ ನಾ ಒಂಟಿ
ವಯಸ್ಸಿನ ಮದದಲ್ಲಿ ನಡೆದಿದ್ದೆ ದಾರಿ
ಬಯಸಿದ್ದು ಪಡೆದೆ ಗಳಸಿ ಹೆಣ್ಣು ಹೊನ್ನು
ಆಯಸ್ಸು ಹೋಯಿತು ಅರಿಯದೆ ಕ್ಷಣದಲ್ಲಿ
ಭಯವಾಗುತ್ತಿದೆ ನೆನೆದು ಕೊನೆಯ ಘಳಿಗೆ
ನಿಲ್ಲಬೇಕಾಗಿದೆ ಉರಿವ ದೀಪದ ಕಂಬದಂತೆ
ವಲ್ಲೆನಂದರು ಬೇಕು ತಂತಿಯ ಆಸರೆ
ಬಲ್ಲವರ ಬಾಳು ಬರಡು ಹುಣುಸೇಮರದಂತೆ
ಚಲ್ಲಿದರು ಪ್ರೀತಿ ಉರಗೋಲು ಬೇಕು ಕೊನೆಗೆ
ನಿಲ್ಲದೀ ಪಯಣ ಮುಂದೆ ಏನೆಂದು ತಿಳಿದಿಲ್ಲ
ಎಲ್ಲರೂ ಹೇಳುವ ಮುಕ್ತಿ ಸಿಗುವುದೆಂದು
ಎಲ್ಲ ಪಕ್ಷಿಗಲಿದ್ದರೇನು ಮುಂದೆ ಕಾಗೆಯೇ ಬೇಕು
ಸಲ್ಲಿಸುವೆ ನಮನ ಇಂದೇ ಮುಂದೆ ಪಿಂಡ ಕಚ್ಚಲು
ರಹದಾರಿ ಸವಿಸಿ ಬಂದಿಹೆನು ಇಲ್ಲಿ
ಕಹಳೆ ಊದುವ ವೇಳೆ ಇರುಳ ಸಂಜೆ
ಬಹಳ ಯೋಚಿಸಿ ವಿದಾಯ ಹೇಳಬೇಕಾಗಿದೆ
ಸಹಿಸಿ ಬಂದಿಹೆನು ಅರಿತು ಬಾಳ ಸಂಜೆ
ತಿರುಗಿ ನೋಡಲಾರೆ ನೆಡೆದು ಬಂದದಾರಿ
ಮರುಗುವೆನು ಮಾಡಿದ ತಪ್ಪುಗಳಿಗೆಲ್ಲ
ಹಗುರವಾಗಿದೆ ಮನಸು ಮುಂದೆ ಸಾಗಲು
ಬೇರೆಗು ಗೊಳಿಸುವ ಲೋಕದ ಕದತಟ್ಟಲು
ಊರುಗೋಲದು ದೇಹ ಸ್ಥಿರ ನಡತೆಗೆ ಅಲ್ಲದೆ ಅದು ಬದುಕಿನ ಉಳಿವಿಗೂ ಸಂಕೇತ.
ಪ್ರತ್ಯುತ್ತರಅಳಿಸಿಕಾಗೆಯಂತಹ ಸ್ನೇಹ ಜೀವಿ ಹಕ್ಕಿಯನು ನೆನೆದು ಕವನವನ್ನು ಅರ್ಥವತ್ತಾಗಿಸಿದ್ದೀರಿ.
dhanyavaada
ಅಳಿಸಿ08/09/2014 ವಾರ: 28
ಪ್ರತ್ಯುತ್ತರಅಳಿಸಿಈ ವಾರದ "ಅತ್ಯುತ್ತಮ ಬ್ಲಾಗ್ ಪೋಸ್ಟ್" ಆಗಿ ಮನಸೆಳೆದದ್ದು:
ಶ್ರೀಯುತ. Prabhanjana Muthagiಅವರ ಈ ಅಪೂರ್ವ ಕವನ "ಇರುಳ ಸಂಜೆ"
http://prabhanjana.blogspot.in/2014/09/blog-post_5.html
ಈ ವಾರ ಇತರರ ಬ್ಲಾಗನ್ನು ಓದಿ "ಅತ್ಯುತ್ತಮವಾಗಿ ಬರೆದ ಕಾಮೆಂಟ್":
ಶ್ರೀಯುತ. Prakash Hegde ಅವರ ಒಳ್ಳೆಯ 'ಛಾಯಾ ಚಿತ್ತಾರ'ಕ್ಕೆ,
ಶ್ರೀಯುತ. Pradeep Rao ಅವರು ಬರೆದ ಈ ಕಾಮೆಂಟ್:
http://chaayaachittara.blogspot.in/2014/09/blog-post.html
Fanofyou