ತೀರವನರಿಯದೆ ಹೋಗುವ ಡೋಣಿ
ನೀರಲಿ ತೇಲುತ ಸಾಗುತಲಿ
ದೂರವನರಿಯದೆ ದಿಕ್ಕನು ನೋಡಿ
ಹರಿಗೋಲನು ಹಾಕುತ ಹರುಷದಲಿ
ಉಸಿರಲಿ ಉಸಿರಾಗಿರುವ ಡೋಣಿ
ಹಸಿವಲಿ ನೀರನು ಕುಡಿಸುತಲಿ
ಬಿಸಿಲಲಿ ಬಳಲಿ ಬೆವರಿಳಿಸಿದರು
ನಸುಕಲಿ ಜೀವ ತುಂಬತಲಿ
ಬಲೆಯನು ಬೀಸುತ ಸಾಗಿದೆ ಡೋಣಿ
ಅಲೆಯನು ಹಿಂದೆ ಸರಿಸುತಲಿ
ಜಲರಾಸಿಯೊಳಗಿನ ಲೋಕವ ನೋಡಿ
ಚಲುವಿನ ಮೀನು ಹಿಡಿಯುತಲಿ
ಧೀರನು ಬೇಕು ನಡೆಸಲು ಡೋಣಿ
ಬಿರುಗಾಳಿಯು ತುಂಬಿದ ಇರುಳಿನಲಿ
ಶೂರನು ಹೆದರದೆ ಸಾಗುವ ಮುಂದೆ
ಭರವಸೆ ಬೆಳಕು ಹುಡುಕುತಲಿ
ಕಡಲ ವೀರ ಮೀನುಗಾರರ ಬವಣೆಯನ್ನು ಮತ್ತು ಶ್ರಮವನ್ನೂ ಚಿತ್ರಿಕೊಟ್ಟ ಕವನವಿದು.
ಪ್ರತ್ಯುತ್ತರಅಳಿಸಿ