ಮಂಗಳವಾರ, ಸೆಪ್ಟೆಂಬರ್ 30, 2014

ಚದುರಿ ಹೋದವು ಮುತ್ತು

ಮುತ್ತಿನಹಾರವಧರಿಸಿ ಮನಸೆಳೆದ ಗೆಳತಿಯ 
ಕತ್ತನು ನೋಡಿ ಮೂಡಿತು ಪ್ರೀತಿ ಕಣ್ಣಂಚಿನಲ್ಲಿ
ಹತ್ತಿರ ಬಂದು ಬರಸೆಳೆದು ತಬ್ಬಲು ದೇಹ
ಚಿತ್ತಾರವಾಯಿತು ಸಂಚಲನ ತುಂಬಿದ ಸ್ಪರ್ಶದಲ್ಲಿ

ಭಂದಿಯಾಗಿವೆ ಹೃದಯ ಏರಿಸುತ ನಾಡಿ ಬಡಿತ
ಹೊರಳಾಡುತಿವೆ ಮುತ್ತು ಆ ಬಿಗಿ ಹಿಡಿತದಲ್ಲಿ
ಚಂದಿರನ ಬೆಳಕಲ್ಲಿ  ರತಿ ಮನ್ಮಥರಾಟವನು
ನೋಡುತ ನಲಿದಾಡುತಿವೆ ಮುತ್ತು ಮೌನದಲ್ಲಿ  

ಹೊಡೆದಾಡುತಿವೆ ಛಲದಿ ಸರದಲ್ಲಿರುವ ಮುತ್ತು
ನಾ ಚಂದ ನೀ ಅಂದ ಈ ಸರಸಮಯದಲ್ಲಿ
ಅರಿವಿಲ್ಲದೆ ಮತ್ತಿನಲಿ ಸರಸವಾಡುತ ಜೋಡಿ  
ಮೈ ಮರೆತು ಉಸಿರೇರಿಸುತ  ಉನ್ಮಾದದಲ್ಲಿ   

ರಸಿಕರಾಟದಲಿ ಚದುರಿ ಹೋದವು ಮುತ್ತು
ನಾ ಮುಂದು ತಾ ಮುಂದು ಮಧುಮಂಚದಲ್ಲಿ
ಮುತ್ತುಗಳ ಸರಮಾಲೇ ಬೀಳಲು ತುಟಿಯಲ್ಲಿ
ದಾರಹರಿದು ಜಾರಿದವು ಮುತ್ತು ಮಂಚದಡಿಯಲ್ಲಿ  

1 ಕಾಮೆಂಟ್‌:

  1. ರಸಿಕ ಕವಿ ಮಿತ್ರ, ಒಂದು ಶೃಂಗಾರದ ಮತ್ತು ಆವರಿಸಿಕೊಂಡಿತು ತಮ್ಮ ಕವನವನ್ನು ಓದಿ.
    ಆ 'ರಸಿಕರಾಟದಲಿ ಚದುರಿ ಹೋದವು ಮುತ್ತು' ಗಳಿಗೆ ಕಲ್ಪನೆಗೆ ಸಿಕ್ಕಿತು ಮುದನೀಡುತ್ತಾ...

    ಪ್ರತ್ಯುತ್ತರಅಳಿಸಿ