ಸೋಮವಾರ, ಸೆಪ್ಟೆಂಬರ್ 1, 2014

ರವಿ

ಬೆಳಕನು ಚಾಚುತ ಇಣುಕುತ ಬಂದೆ 
ಬಾನಂಗಳದ ಅಂಚಿನಲಿ 
ಮುಸುಕೆಳೆದವರ ಹೊಡೆದೆಬ್ಬಿಸಿ  
ಉತ್ಸಾಹ ತುಂಬುತ ಹಗಲಿನಲಿ 

ಚಿಲಿಪಿಲಿ ಗುಟ್ಟುತ ಹಾರಿವೆ ಹಕ್ಕಿ 
ಕನಸನು ಕಟ್ಟುತ ಆಸೆಯಲಿ   
ತೋರಿಸು ದಾರಿ ಬೀರುತ ಬೆಳಕು 
ಹಾರಲಿ ಹಕ್ಕಿಗಳು ಹರುಷದಲಿ 

ಹರಿಯುವ ನದಿ ಪುಳಕಿತಗೊಂಡವು 
ಕಿರಣಗಳ ಕೋಳಾಟ ಆಡುತಲಿ
ಮೌನವ ಮುರಿದು ಪರವಶಗೊಂಡವು 
ಜಲಚರ ವೇಗದಿ ಓಡಾಡುತಲಿ

ಬಣ್ಣವ ಬದಲಿಸಿ ಅಂದದಿ ನಗುತಿವೆ   
ಗಿರಿತುದಿಗಳು ಮನ ಸೆಳೆಯುತಲಿ 
ಏರುತ ಏರುತ ಬೀರುತ ಪ್ರಖರತೆ 
ಓಡಿಸುವೆ ಚಳಿ ಮುಂಜಾವಿನಲಿ 

ಬೇಸರವಿಲ್ಲವೇ  ನಿಲ್ಲದೆ ಓಡುವೆ  
ಸಮಯವ ಸವಿಸುತ ದಿನದಲ್ಲಿ
ನಿಂತರೆ ಎಲ್ಲವ ನಿಲ್ಲಿಸಿಬಿಡುವೆ 

ನೀನಿರುವೆ ಹಸಿರು ಉಸಿರಿನಲಿ  

1 ಕಾಮೆಂಟ್‌:

  1. ಶಿಶು ಕಾವ್ಯ ಮರೆಯಾಗುತಿದೆ ಎಂದು ಹಲುಬಿದೆ! ನಿಮ್ಮ ಈ ಕವನ ಒಳ್ಳೆಯ ಗೀತೆಯಾಯಿತು.
    ಶೂಪರ್ರು:
    :ಏರುತ ಏರುತ ಬೀರುತ ಪ್ರಖರತೆ
    ಓಡಿಸುವೆ ಚಳಿ ಮುಂಜಾವಿನಲಿ :

    ಪ್ರತ್ಯುತ್ತರಅಳಿಸಿ