ತಂಗಾಳಿ ಬೀಸುತಿದೆ ನಿನ್ನ ನೆನಪು ಕಾಡುತಿದೆ
ಮುದ್ದು ಮಾಡುವ ಬಾ ಓ ನನ್ನ ನಲ್ಲೆ
ಕಾಯುವೆ ನಿನಗಾಗಿ ಈ ನದಿ ಅಂಚಿನಲ್ಲೆ
ಹಾರಿ ಬಾ ಹಕ್ಕಿಯಂತೆ ರೆಕ್ಕೆ ಕಟ್ಟಿ ನಾ ಇರುವಲ್ಲಿಗೆ
ಕೂಡುವ ಜೊತೆಯಾಗಿ ಬಾ ಓ ನನ್ನ ನಲ್ಲೆ
ಸಹಿಹಕ್ಕೆ ಹಾತೊರೆದು ಕೊತಿರುವೆ ಇಲ್ಲೇ
ಆಕಾಶ ತುಂಬಾ ನಕ್ಷತ್ರಗಳು ಪೂರ್ಣ ಚಂದಿರನು
ಕದ್ದು ನಮ್ಮ ನೋಡುವರು ಬಾ ಓ ನನ್ನ ನಲ್ಲೆ
ಕದ್ದು ಮುದ್ದುಸಿ ಅವರ ಕಾಡಿಸುವುದು ನಾ ಬಲ್ಲೆ
ತೋಟದಲ್ಲಿರುವ ಗುಲಾಬಿ ನಗುತಿದೆ ನನ್ನ ನೋಡಿ
ಬೇಗ ಬಳ್ಳಿಯಂತೆ ಬಳಕುತ ಬಾ ಓ ನನ್ನ ನಲ್ಲೆ
ಗುಲಾಬಿ ಮುಡಿಯಲ್ಲಿ ಇಟ್ಟು ನಿನ್ನ ವರಿಸುವೆ ಇಲ್ಲೇ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ