ಯಾವ ಲೋಕದ ಚಲುವೆ ನೀನು
ಕಣ್ಣ ನೋಟದಲ್ಲೇ ಕೊಲ್ಲುವೇ
ಸ್ವರ್ಗ ರಾಜನ ಮಗಳೇ ನೀನು
ಚಿನ್ನ ಮಾತಿನಲ್ಲೇ ಗೆಲ್ಲುವೆ
ಹೊಳೆಯುವ ಕಂಗಳಿಗೆ ಹರಣಿ ಎಂದು ಹೆಸರಿಡಲೇ
ಅಳುಕದೆ ಬಳುಕುವೆ ಜಾನ್ಹವಿ ಎನ್ನಲೇ
ತಿಳಿ ಗಗನ ನಿನಗೆ ಅಭಿಜ್ಞ ಎಂದು ಕರೆಯಲೇ
ಬಿಳಿದಾದ ತಾವರೆ ಮುಖದವಳೇ !
ಸುಪ್ರಮತಿ ನಿನಗೆ ಪ್ರಮಿತ ಎಂದು ಹೆಸರಿಡಲೇ
ಸುಪ್ರೇಮ ಕೊಡುವ ನಿನಗೆ ಸುಪ್ರೀತ ಎನ್ನಲೇ
ಅಪ್ರತಿಮ ಸುಂದರಿ ಪ್ರಣೀತ ಎಂದು ಕರೆಯಲೇ
ಅಪ್ರಮೇಯನ ಹೋಲುವ ಮುಖದವಳೇ!
ವಾಯುದೇವನ ರಾಣಿ ಭಾರತಿ ಎಂದು ಹೆಸರಿದಲೇ
ಲಯ ಕಾರಕನ ರಾಣಿ ಗೌರಿ ನೀ ಎನ್ನಲೇ
ಕಾಯುವ ಗುಣಕ್ಕೆ ಗುಣನಿಧಿ ಎಂದು ಕರೆಯಲೇ
ಛಾಯೇ ಚಂದ್ರನ ಕಾಂತಿ ಇರುವವಳೇ!
ಚಂದ್ರನ ಮುಖಕೆ ಚಂದ್ರಿಕಾ ಎಂದು ಹೆಸರಿಡಲೇ
ಇಂದ್ರನ ಲೋಕದ ನಿನಗೆ ಪಾರಿಜಾತ ಎನ್ನಲೇ
ಕೃತ್ತಿ ವಾಸನ ರಾಣಿ ಸುಕೃತಿ ಎಂದು ಕರೆಯಲೇ
ಚಕ್ರ ಧರನ ಎದೆಯಲಿ ಇರುವವಳೇ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ