ಏನ್ ಹೇಳಲಿ ಪ್ರಿಯೆ ನೀನು ಇರುವೆ ಅಸ್ಟು ದೂರ
ಹೃದಯದ ಬಡಿತ ಬೆರೆತಿದೆ ಅದ ನೋಡು ಬಾರಾ
ನಿನ್ನ ಜೊತೆ ಇರುವಾಸೆ ಉರು ಸುತ್ತುವ ಆಸೆ
ಹೊಸ ಬಟ್ಟೆ ಗಳ ಕೊಡಿಸಿ ಹಾಕಿ ನೋಡುವ ಅಸೆ
ಬಂದರೆ ಸುಮ್ಮ್ಮನೆ ಬಿಡುವರೇ ನಿಮ್ಮ ಅಮ್ಮ
ಹೊರ ಹಾಕುವರು ಹಿಡಿದು ಕೊಟ್ಟು ಒಂದು ಗುಮ್ಮ
ಸಂಜೆ ಸಮುದ್ರದ ದಡದಿ ಕೈ ಹಿಡಿದು ನಡೆವಾಗ ,
ಏರುವ ಅಲೆ ಬಂದು ನಿನ್ನ ಕಾಲು ಚುಂಬಿಸಿದಾಗ,
ಹೊಡಿಯ ಹೋದೆ ಹುಡುಕಿ ಅದನ್ನು ಬರೆ ಕೈ ಇಂದ
ಓಡಿ ಹೋಯಿತು ನನ್ನ ಕೆಣಕಿ ಒಂದು ಕಡೆಯಿಂದ !.
ಕನಸು ಕಾಣುವುದೇನು ಇಂದು ಮೊನ್ನೆಯದಲ್ಲ,
ನನಸು ಆಗುವುದು ಕೂಡ ನಮ್ಮ ಕೈಯಲಿ ಇಲ್ಲ,
ಬೇಡಿಕೊಳ್ಳುವ ಬಾ ದಿವಸ ನಾವು ಜೊತೆಯಾಗಿ,
ಹರಸಿದರೆ ನಡೆಸುವ ಸಹಜ ಜೀವನ ಹಿತವಾಗಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ