ಮುಂಗುರುಳು ಹಾರುತಿವೆ ನಿನ್ನ ಕಂಗಳ ನೋಡಿ
ಚಂಗನೆ ಹಾರುತಿದೆ ಹೃದಯ ನಿನ್ನ ಮುಂಗುರುಳು ಕಾಡಿ
ತಿಲಿಹಾಲಿನಂತೆ ಸೊಬಗ ಸುರಿಸುತಿಹೆ ನೀನು
ಆ ಜೀನಿನಂತೆ ಸಿಹಿಯ ಹೀರಲು ಬರುವೆ ನಾನು
ಮುಗುಳ್ನಗೆ ತುಂಬಿದ ನಿಶ್ಚಲ ಸಮುದ್ರ ನೀನು
ಚಂಚಲ ಮನಸಿನ ಸಾಗರದ ಅಲೆಗಳಂತೆ ನಾನು
ಮಧುರ ತಂಗಾಳಿ ಬೀಸುತಿದೆ ವರುಣನ ಮಗಳೇ ನೀನು
ಅದರ ತಂಪಿನಲಿ ಮಿಂದು ಸೇರಬಯಸುವೆ ನಿನ್ನಲ್ಲಿ ನಾನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ