ಸೋಮವಾರ, ಏಪ್ರಿಲ್ 20, 2009

ತೋರಿಸುತಿದ್ದೆ

ಏನು ತಿಳಿಸಲಿ ಪ್ರಿಯೆ
ನಿನ್ನ ಅಷ್ಟು ದೂರ ಇಟ್ಟುಕೊಂಡು
ಹಾಗೇ ಸುರಿಸುವೆ ಪ್ರೀತಿಯ ಮಳೆಯನ್ನ
ನೀ ಬಂದರೆ ನನ್ನ ಹುಡುಕಿಕೊಂಡು

ದೂರ ನಿಂತು ಮತನಾಡದೆ ಹತ್ತಿರ ಬಂದರೆ
ತೋರಿಸತಿದ್ದೆ ಲಗು ಬಗೆ ಇಂದ ನುಡಿವ ನನ್ನ
ಹೃದಯ ಕವಾಟದ ಬಾಗಿಲಿನ ಚಿಲಕ ತೆಗೆದು
ನನಗಾಗಿ ಮಿಡಿಯುವ ಒಳಗಿರುವ ನಿನ್ನ ಬಿಂಬವನ್ನ

ಆದರದಿಂದ ಬಂದು ಬಿಗಿದಪ್ಪಿದರೆ
ತೋರಿಸುತಿದ್ದೆ ನಿನ್ನ ಉಸಿರ
ಏರಿಳಿತಗಳ ಮಧ್ಯ ಬರುವ ಆ ಲಯದ
ಸ್ವರದಲ್ಲಿ ಅಡಗಿರುವ ಸ್ಪಂದಿಸುವ
ನನ್ನ ಮನಸಿನ ತುಡಿತವನ್ನ

ಮೈ ಮರೆತು ಸುಮ್ಮನೆ ಚುಂಬಿಸಿದ್ದರೆ
ತೋರಿಸುತಿದ್ದೆ ನಿನ್ನ ಪ್ರೀತಿಯ
ದುಗುಡದ ಒಳಗಿನ ಸರಸ ಸಲ್ಲಾಪದ
ಮಂಥನದಿಂದ ಬಂದ ಅಮೃತದ
ಸವಿಯ ಸುಧೆಯ ಆ ರುಚಿಯನ್ನು

ಕಾಂತಿಯ ಕಣ್ಣಿನಿಂದ ಒಮ್ಮೆ ನೋಡಿದರೆ
ತೋರಿಸತಿದ್ದೆ ಅದರೋಳಗಿನ ರೇಖೆಗಳ
ಪ್ರತಿಬಿಂಬದ ಸೃಷ್ಟಿಯಿಂದ ಮೂಡಿಸುವ
ಕಾಮನ ಬಿಲ್ಲಿನ ಹಿಂದಿರುವ ಬಣ್ಣಗಳು ತುಂಬಿದ
ನೀ ಇರುವ ಆ ನನ್ನ ಕನಸಿನ ಲೋಕವನ್ನು

:ಪ್ರಭಂಜನ ಮುತ್ತಿಗಿ

2 ಕಾಮೆಂಟ್‌ಗಳು: