ಯಾವ ಉರಲಿ ನಡೆದೆ ಕೊನೆಯಲಿ
ನಿನ್ನ ಹುಡುಕುತ ಮೆಲ್ಲಗೆ
ಹಸಿರ ಹಾಸಿನ ಬೆಟ್ಟ ದಾಟಿದೆ
ನಿನ್ನ ಸುಳಿವು ಇಲ್ಲದೆ
ಮಂಜು ಮುಸುಕಿದ ಮೋಡದಲ್ಲಿಯು
ನಿನ್ನ ಕಾಣುತ ಹರುಷದಿ
ಗಾಳಿ ಬೀಸಲು ಕರಗಿ ಹೋಯಿತು
ಕನಸು ಸೊರಗಿತು ಆ ಕ್ಷಣದಲಿ
ದಟ್ಟ ಕಾಡಲು ಬಿಂಬ ಕಾಣಲು
ನಡೆದೆ ಅಂಜಿಕೆ ಇಲ್ಲದೆ
ಭ್ರಮೆಯ ರೂಪವು ಹಾರಿ ಹೋಗಲು
ಸುತ್ತಲು ಕತ್ತಲು ಆವರಿಸಿತು
ಹೆಜ್ಜೆ ಗುರಿತಿನ ಎಳೆಯ ಹಿಡಿದು
ಹೋದೆ ನದಿ ಅಂಚಿನ ಮರಳಲಿ
ಬಿಸಿಲು ಏರಲು ಕಾಣದಾಗಿತು
ಕವಲು ವಡೆಯಿತು ದಾರಿಯು
ಎಲ್ಲಿ ಹುಡುಕಿದರೇನು ನಿನ್ನನು
ಸಿಗುವುದೆಂದೋ ತಿಳಿಯದು
ಇರುವುದೆಲ್ಲವ ಬಿಟ್ಟು ನಿನ್ನನು
ಹುಡುಕದೆ ಜೀವನ ಸಾಗದು
:ಪ್ರಭಂಜನ ಮುತ್ತಿಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ