ಭಾನುವಾರ, ಮೇ 24, 2009

ವಿನೂತನ ಸೃಷ್ಟಿ

ಮುಂಗಾರು ಮೂಡಗಳಂತೆ
ಹರಿವ ಬಿರುಸಾದ ಮಾತಿನ ಚಲುವೆ ..
ಮಳೆಯ ಸಿಂಚನ ದಂತೆ
ಉಲ್ಲಾಸ ಕೊಡುವ ಪ್ರೀತಿಯ ಒಲವೆ

ಇಂಪಾದ ಮಾತಿನ ಮೋಹಕ ರೂಪ
ಅಡಿಯಿಂದ ಮುಡಿಯ ವರೆಗೆ
ನಸು ನಕ್ಕು ನಲಿದಾಡುತ
ಕುಣಿವ ನವಿಲಿನಂತೆ ನಿನ್ನ ನಡುಗೆ

ಮುಂಜಾನೆಯ ಕೆಂಪು ಕಿರಣದಿಂದ
ಇಬ್ಬನಿಯ ಹನಿಯಂತೆ ಹೊಳೆವ ನೋಟ
ಹೂವಿನ ಅಂದಕೆ ಮಾರು ಹೋದ ದುಂಬಿಯಂತೆ
ಹೇಳುವೆ ಪ್ರೀತಿಯ ಗೆಳೆತನದ ಪಾಠ

ಆಗಸದಲಿ ಹೊಳೆವ ಚಂದಿರನಂತೆ
ತಂಪೆರೆವ ಪ್ರೇಮದ ಚಿಕ್ಕ ಹೃದಯ
ಈಗತಾನೇ ಚಿಗುರಿದ ಎಲೆಯಂತೆ
ನವಿರಾದ ಅನುಭವ ಕೊಡುವ ನಿನ್ನ ಸನಿಹ

ಆರಿಸಿದರು ಸಿಗದ ಅನುಭಾವಕೆ ಬಾರದ
ನನಗಾಗೆ ಉದಯಿಸಿದ ವಿನೂತನ ಸೃಷ್ಟಿ
ಹನಿ ಹನಿ ಕೂಡಿ ಹಳ್ಳ, ನದಿ ಹರಿದಂತೆ
ಧುಮುಕಿ ಹರಿದು ಕೊಡು ನನ್ನ ಕನಸಿಗೆ ಪುಸ್ಥಿ

:ಪ್ರಭಂಜನ ಮುತ್ತಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ