ಕಾನನದ ರಾಜ ನೀನು
ಏನು ಹಸಿವೆ ಇಲ್ಲವೇನು ?
ಕೃಷೆಯಾದ ದೇಹ ದಿಂದ
ತೃಷೆ ನೀಗಿಸಲಾದೆಯೇನು
ಬಂದು ಬಿಡಲೇ ಒಡನಾಡಿಯಾಗಿ
ಎನಿಸಿದರೂ
ಮಕ್ಕಳ ಬಿಟ್ಟು ಬರಲಾರೆ ನಾನು
ಅಷ್ಟು ಬೇಟೆಯಾಡಿ ಉಣ್ಣಿಸಿದ
ಮಕ್ಕಳು ಬಿಟ್ಟು ಹೋದರೇನು
ಹೆಂಡಿರು ಮಕ್ಕಳು ಗೆಳಯರು ಇಹರು
ದೇಹದ ಶಕ್ತಿ ಸಧೃಡ ಇರುವವರೆಗೂ
ಮುಪ್ಪು ನಿನಗೂ ನನಗು ಬಹುದು
ಎಲ್ಲರದೂ ಅದೇ ಗೋಳು ಕೊನೆಯವರೆಗೂ
ಪ್ರಭಂಜನ ಮುತ್ತಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ