ಬುಧವಾರ, ಮಾರ್ಚ್ 22, 2023

*ಶೀರ್ಷಿಕೆ*

ಏನೆಂದು ಹೆಸರಿಡಲಿ ಓ ನನ್ನ ಕವನ
ಹೆಸರು ಇನ್ನೊಂದೇಕೆ ನಿನ್ನ  ಹೆಸರೇ ಕವನ

*ಕ*ನ್ನಡ ಪದಗಳ ಜೊತೆ ನಿತ್ಯ ನೆಡೆಯುವುದು ಮಥನ
*ವ*ರವಿಹುದು ನನಗೆ ಬರೆಸಿಕೊಳ್ಳುವೆ ನೀನೆ ನಿನ್ನ
*ನ*ನ್ನರಿವಿನೊಳ್ ನೀ ಜನಿಸಿ  ಹೊರಬರುವೆ ಎಷ್ಟು ಚೆನ್ನ

ಹೆರುವ ನೋವಿದ್ದರೂ ಸಹಿಸಿರುವೆ ಹೆಣ್ಣಂತೆ  ನಿನ್ನ
ಹೆತ್ತು ಸುಮ್ಮನಿರಲಾರೆ ತೋರಿ ನಲಿವೆ ಜಗಕೆಲ್ಲ ಕವನ

ನೋವಿನ ಅನುಭವವಿದ್ದರೂ ಮತ್ತೆ ಭಾವಗರ್ಭಕೆ 
ಸಿದ್ಧನಾಗುವೆ ಬರೆಯಲು ನಾನು ಮತ್ತೊಂದು ಕವನ

-ಪ್ರಭಂಜನ ಮುತ್ತಿಗಿ 

ಸಾಧನಾ

 ಹೆಸರೊಂದು ನಿನಗಿಡಲು
ಹೊಸ ಹೆಸರು ಹುಡುಕುತಿರುವೆ
ಹೊಳೆಯುವ ತಾರೆ ನನ್ನ ಮಗಳೇ 

ರಾಗಗಳ ಹೆಸರಿಡಲೇ 
ಸಾಗರದ ಹೆಸರಿಡಲೇ 
ಮೊಗ ಚಂದಿರನಂತಿದೆ ನನ್ನ ಮಗಳೇ 
 
ಮುತ್ತೈದೆಯರೆಲ್ಲರೂ  
ಎತ್ತಿ ಆರತಿ ಹಾಡುತಿಹರು 
ಕತ್ತು ತಿರುಗಿಸಿದ ಮಗಳೇ ಏನು ಹೆಸರಿಡಲೇ 

ತೊಟ್ಟಿಲು ತೂಗುತ್ತಿರಲು 
ಬಟ್ಟಲು ಕಣ್ಣು ಬಿಟ್ಟು ನೋಡುತ್ತಿರಲು 
ಕೊಟ್ಟು ಬಿಡಲೇ  ನಿನಗೆ ಹೆಸರು ಮಗಳೇ

ಶೋಧಿಸಿ ಪ್ರಜ್ಞಾನಂತರ್ಜಾಲ  
ಸಾಧನೆ ನಿನ್ನ ಉಸಿರಾಗಲಿ ಎಂದೆಣಿಸಿ 
ಸಾಧನಾ ಎಂದು ಹೆಸರಿಸಿರುವೆ ನನ್ನ ಮಗಳೇ 

ವಿದ್ಯಾ ವಿನಯ ಒಳ್ಳೆಹೆಸರು
ಶುದ್ಧ ಪ್ರೀತಿ ಜೀವನದಲ್ಲಿ 
ಸಾಧಿಸಿ ಬೆಳೆಯುತ್ತಿರು ನನ್ನ ಪ್ರೀತಿಯ ಮಗಳೇ 

ಅಮ್ಮ ನಿನ್ನ ಮಡಿಲಲ್ಲಿ


ಅಮ್ಮ ನಿನ್ನ ಎದೆಗೂಡಲ್ಲಿರುವೆ  
ಭಯವೇ ಇಲ್ಲಾ ನನಗೆ 
ಸುಮ್ಮನೆ ಯಾಕೆ ನೀನಾಗಿರುವೆ 
ಭಯವಾಗಿದೆಯಾ ನಿನಗೆ 

ಕಾಡಲ್ಲಿ ಮರದಿಂದ ಮರಹಾರುತಿದ್ದೆ  
ಹಿಡಿದ ಬೆಸುಗೆ ಸಡಿಲಿಸದೆ  
ಸಡಿಲವಾಗುತಿದೆ ನಿನ್ನೀ ಒಡಲು 
ಹಿಡಿದು ಎಳೆಯುತಿರುವವನಾರೆ 

ಅಮ್ಮ ನಿನ್ನ ಮಡಿಲಲ್ಲಿ ನೆತ್ತರು 
ಸುಮ್ಮನಿರಲಿ ಹೇಗೆ ನಾನು 
ಗುಮ್ಮನ ಕಾಲಿಗೆ ಕಚಗುಳಿ ಇಡುವೆ 
ಚಂಗನೆ ಹಾರಿ ಮರವ  ಏರು 

 ಪ್ರಭಂಜನ.

ಮುಪ್ಪು

 ಕಾನನದ  ರಾಜ ನೀನು 
ಏನು ಹಸಿವೆ ಇಲ್ಲವೇನು ?
ಕೃಷೆಯಾದ ದೇಹ ದಿಂದ 
ತೃಷೆ ನೀಗಿಸಲಾದೆಯೇನು 

ಬಂದು ಬಿಡಲೇ ಒಡನಾಡಿಯಾಗಿ
ಎನಿಸಿದರೂ 
ಮಕ್ಕಳ ಬಿಟ್ಟು ಬರಲಾರೆ ನಾನು 
ಅಷ್ಟು ಬೇಟೆಯಾಡಿ ಉಣ್ಣಿಸಿದ 
ಮಕ್ಕಳು ಬಿಟ್ಟು ಹೋದರೇನು   
 
ಹೆಂಡಿರು ಮಕ್ಕಳು ಗೆಳಯರು ಇಹರು 
ದೇಹದ ಶಕ್ತಿ ಸಧೃಡ ಇರುವವರೆಗೂ 
ಮುಪ್ಪು ನಿನಗೂ ನನಗು ಬಹುದು 
ಎಲ್ಲರದೂ ಅದೇ ಗೋಳು ಕೊನೆಯವರೆಗೂ 

ಪ್ರಭಂಜನ ಮುತ್ತಗಿ  

ಚಿಗುರು