ಮಲಗಲೊಂದು ಚಾಪೆ
ಪಾದ ಸವಿಯದಂತೆ ರಕ್ಷೆ
ಉರುಗೋಲು ನೀನಾದರೆ
ಬೇರೆ ಬೇಕಿನ್ನೇನು ನನಗೆ - ಮಗನೆ
ಮುದಿ ಜೀವ ಇರುವುದಿನ್ನ
ನಿತ್ಯ ತಿನ್ನುವೆ ತುತ್ತು ಅನ್ನ
ಅರ್ಥ ಮಾಡಿಕೊ ಇಳಿಯ ಮನಸ್ಸನ್ನ
ಕೊಟ್ಟರೆ ಸಾಕು ಸ್ವರ್ಗ, ಸಮಯವನ್ನ - ಮಗನೆ
ಹೋದ ಮೇಲೆ ಪಿಂಡ ಕಟ್ಟಿ
ಚಾಪೆ ಚಪ್ಪಲಿ ಛತ್ರಿಯನ್ನ
ಹಾಸಿಗೆ ಸಹಿತ ದಾನ ಮಾಡಿದರೆ
ಸಿಗದು ನನಗೆ, ನೀ ತಿಳಿದರೆ ಚನ್ನ - ಮಗನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ