ಬಳ್ಳಿ ಹುಬ್ಬಿನ
ಹೊಳೆವ ಕಣ್ಣಲಿ
ಮಿಂಚು ಒಂದು ಮೂಡಿದೆ
ತಂಗಾಳಿ ಬೀಸಲು
ಬಳುಕಿ ಕೂದಲು
ಗಂಧ ಸೂಸುತ ಹಾರಿದೆ
ಬಿರಿದ ಸಂಪಿಗೆ ಹೂವಿನಂತೆ
ನೀಳ ನಾಸಿಕ ನಾಚಿದೆ
ಕಂಚಿನಂಥ ಮಾತಿನಲ್ಲಿ
ತುಟಿಯು ಮೆಲ್ಲಗೆ ನಗುತಿದೆ
ತಾರೆಯಂತೆ ಹೊಳೆವ ಮುಖದಲಿ
ಇಂದ್ರಲೋಕವೇ ಇಳಿದಿದೆ
ರಂಭೆ ಊರ್ವಶಿ ಮೇನಕೆಗೇನು ಕಮ್ಮಿ
ಸೌಂದರ್ಯ ಕಣ್ಮನ ಸೆಳೆದಿದೆ
ಮಯೂರಿಯಾಗಿ ಹರಿಣಿಯಾಗಿ
ಎದೆಯ ತುಂಬಾ ಓಡಾಡಿದೆ
ಕನಸಿನಲ್ಲೂ ನನಸಿನಲ್ಲೂ
ನಿನ್ನನೇ ಕಾಯುತ ಕುಳಿತಿಹೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ