ಗುರುವಾರ, ಮಾರ್ಚ್ 18, 2021

* ವಿಷಕಂಠ *


ಎಂಥ ವಿಚಿತ್ರ ಸಂಸಾರ 
ನಿನ್ನದು ವಿಷಕಂಠ  
ವೈರುಧ್ಯದ ಮಧ್ಯ 
ಬದುಕುವುದೇ ವೈಕುಂಠ. 

ಬೂದಿ ಸರ್ಪವ  ಸುತ್ತಿ  
ಕಟ್ಟಿದ ಜಡೆಯಲ್ಲಿ ನೃತ್ಯ 
ಮಹಾ ಸುಂದರಿ ಗೌರಿ 
ಹೇಗೆ ಒಪ್ಪಿದಳು ಈ ಸಾಂಗತ್ಯ
 
ಆರುಮುಖದವನಿಗೆ 
ಸಾವಿರಾರು ಕಣ್ಣುಗಳ ವಾಹನ 
ಸೊಂಡಿಲು ಮುಖದವನಿಗೆ 
ಇಲಿ ಬೇಕಿತ್ತಾ ಅಷ್ಟು ನಿಧಾನ 

ಹಾವು ಇಲಿಯ ಹಿಡಿದರೆ 
ನವಿಲು ಹಾವ ಹಿಡಿವುದು 
ಹುಲಿಯು ವೃಷಭ ಹಿಡಿದರೆ 
ಏನು ಮಾಡುವಿರಿ ಓಡಾಡಲು  

ಜಗದ ಬೂದಿ ತೊಳೆಯಬಹುದು
 ನೀ ಜಟೆಯ ಬಿಚ್ಚಿ ಗಂಗೆ ಹರಿದರೆ 
ಮನಸ ಕೊಳೆ ತೊಳೆದುಬಿಡು 
ಮನುಜ ಬರುವ ಸರಿದಾರಿಗೆ 

ಸೋಮವಾರ, ಮಾರ್ಚ್ 8, 2021

*ಕನ್ನಡತಿ**


ಹೃದಯದರಮನೆಯೊಳಗೆ 
ಇಟ್ಟಿರುವೆ ನಿನ್ನದೊಂದು ಚಿತ್ರ 
ಬರೆದು ಬಿಡಲೇ ಅದರ ಹಿಂದೆ 
ಕಾವ್ಯಾತ್ಮಕ  ಪ್ರೇಮ ಪತ್ರ 

ಮನಸ್ಸು ಕುಣಿದಾಡುವುದು 
ಬಂದರೆ ನಿ ನನ್ನ ಹತ್ರ
ಬೆರೆಳುಗಳು ಶರವೇಗದಿ ಓಡುವವು 
ಹೊಸ ಸೃಷ್ಟಿಗೆ ನೀನೇ  ಪಾತ್ರ  

ಚಿತ್ರ ಪತ್ರಗಳೊಳಗಿಟ್ಟು 
ಹುಡುಕುವುದೇ ವಿಚಿತ್ರ 
ಹುಡುಕುವೆ ಹಾದಿ ಬೀದಿಗಳಲ್ಲಿ 
ಸಿಗುವೆ ರಾಜ್ಯೋತ್ಸವದ ದಿನ ಮಾತ್ರ 

- ಪ್ರಭಂಜನ ಮುತ್ತಿಗಿ 

ಒನಕೆ ಎತ್ತಿ ಕುಟ್ಟು

 ಬಾ ಒನಕೆ ಎತ್ತಿ  ಕುಟ್ಟು . ಪ. 


ಗದ್ದೆ ಇಂದೆದ್ದು ಬಂದ ಭತ್ತದ  
ಬಿದ್ದ ಕಾಳು ಅವಲಕ್ಕಿ ಯಾಗುವಂತೆ  . ಆ. ಪ 

ಒಬ್ಬರಾದ ಮೇಲೆ ಒಬ್ಬರು 
ಹಾಕೋಣ ಬಾ ಒನಕೆ ಏಟು 
ಕುಟ್ಟುವ ನೆಪದಲ್ಲಿ ಸೇರಿ 
ಆಡುವ ಒನಕೆ ಕುಣಿಕೆಆಟ ನೋಡು.   ೧

ಹಾಡೋಣ ಸುಗ್ಗಿ ಹಾಡು 
ಆಗದು ಕೆಲಸದ ಸುಸ್ತು ನೋಡು 
ಬಿದ್ದ ಅವಲಕ್ಕಿ ಸೋಸಿ ಒಣಗಿಸುವೆ 
ನೀಗುವುದು ಎಲ್ಲರ  ಹೊಟ್ಟೆ ಪಾಡು  ೩ 

ಕಷ್ಟ ಗಳನ್ನೆಲ್ಲಾ ಕುಟ್ಟಿ ಪುಡಿಮಾಡಿ
ಒಟ್ಟಾಗಿ ಎಸೆದು ಬಿಡುವ ನಾವು 
ಎದುರಿಸುವಾ ಜೀವನ ಗುಡಿಸಲು
ಅರಮನೆ ಯಾಗುವುದು ಬೇಗ  ನೋಡು   ೩

ಕವನ ಸುನಾಮಿ

 ಬೋರ್
ಆಗದಿರಲಿ
ಎಂದು
ಬರೆದಿಲ್ಲ
ಕವನ
ಎಂದುಕೊಳ್ಳಬೇಡಿ 

ಊರ್ 
ನಲ್ಲಿರಲಿಲ್ಲ 
ಎಂದು
ಬರೆದಿಲ್ಲ 
ಕವನ 
ಸುನಾಮಿಗೆ ಕಾದುನೋಡಿ 

ಹೆಣ್ಣೇ

ಧರೆಗಿಳಿದ
ನನ್ನ ಕಣ್ಣು
ನೋಡಿದ್ದು 
ನಿನ್ನನ್ನೇ 


ಧರಣಿಯಂತೆ 
ತಪ್ಪು ಒಪ್ಪುಗಳ 
ತಿದ್ದಿ ಬೆಳೆಸಿತು   
ನಿನ್ನ ಕ್ಷಮೆ
 
ಕತ್ತಿಗಿಂತಲೂ ತೀಕ್ಷ್ಣ 
ಕಣ್ಣಲ್ಲಿ ಕಣ್ಣಿಟ್ಟು 
ಪ್ರೀತಿಸಿದಾಗ 
ಆ ನಿನ್ನ ಕಣ್ಣೇ 

ಎಲ್ಲಡೆ ಇರುವ  
ಗಾಳಿಯಂತೆ  
ಕಾಪಾಡುವ 
ಜಗಜ್ಜೀವನ ಕಣ್ಣೇ
ಅದುವೇ ನೀ ಹೆಣ್ಣೇ