ನಾನು ಹುಡುಗ ನೀನು ಹುಡುಗಿ
ಕಾಡುವೆ ಏಕೆ ಕನಸಲಿ .
ಒಮ್ಮೆ ಎದಿರು ಬಂದು ನೋಡು
ಪ್ರೀತಿ ಸುರಿಸುವೆ ಎದುರಲಿ
ಒರೆಕಣ್ಣು ಕೆನ್ನೆ ಮೇಲೆ
ಸೆಳೆವುದೊಂದು ಸಣ್ಣ ಕುಳಿ
ಗಲ್ಲ ಹಿಡಿದು ವತ್ತಲೇ ಮೊಹರು
ಗಲ್ಲ ಹಿಡಿದು ವತ್ತಲೇ ಮೊಹರು
ನಿನ್ನ ಹಣೆಗೆ ನನ್ನ ತುಟಿಯಲಿ
ತೆರೆದ ಬಾಹುಗಳಿಂದ ಅಪ್ಪಿ
ಬಿಸಿಯೇರಿಸಲೇ ಈ ಚಳಿಯಲ್ಲಿ
ತಬ್ಬಿಕೊಂಡು ನಿಂತು ಪ್ರೀತಿ
ಪಿಸುಮಾತು ಹೇಳಲೇ ಕಿವಿಯಲ್ಲಿ
ಮಂಜು ಸುರಿವ ರಸ್ತೆಯಲ್ಲಿ
ಮಂಡಿಯೂರಿ ನಿಲ್ಲುವೆ ನಿನ್ನಡಿಯಲಿ
ಮಂದಿ ಸುತ್ತಲಿದ್ದರೂ ಕೊಡುವೆ ಹೂ
ಮಂದಿ ಸುತ್ತಲಿದ್ದರೂ ಕೊಡುವೆ ಹೂ
ಮಂದಗಮನೆ ಮುಡಿದು ಬಿಡು ಎದೆಯಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ