ಇರುಳಲ್ಲಿ ತಾರಸಿಯಲ್ಲಿ
ಅಕ್ಕ ಪಕ್ಕ ಕುಳಿತು ಇಲ್ಲಿ
ಕನಸುಗಳ ಬಿಚ್ಚಿಕೊಂಡು
ಚಿಲುಮೆ ಕಾಸುತ ಚಳಿಯಲ್ಲಿ
ನೋಡಲ್ಲಿ ಮೋಡದಲ್ಲಿ
ವಿಮಾನ ಹಾರುವುದಲ್ಲಿ
ರೆಕ್ಕೆ ಪುಕ್ಕ ಕಟ್ಟಿಕೊಂಡು
ಹಾರೋಣ ಬಾ ಬಾನಿನಲ್ಲಿ
ನನ್ನಲ್ಲಿ ನಿನ್ನಲ್ಲಿ
ಇಲ್ಲದಿರುವುದು ನೋಡು ಅಲ್ಲಿ
ಅಲ್ಲಿರುವುದ ನೋಡಿಕೊಂಡು
ಆವಿಷ್ಕಾರಿಸೋಣ ಬೆಳಕು ಚಲ್ಲಿ
ಚಂದ್ರಲೋಕ ನಿನ್ನದಿರಲಿ
ಮಂಗಳ ಲೋಕ ನನ್ನದಿರಲಿ
ಅವೆರೆಡರ ಸುತ್ತಿಕೊಂಡು
ಮುಂದೆ ಸಾಗುವ ನಕ್ಷತ್ರ ಲೋಕದಲ್ಲಿ
-ಪ್ರಭಂಜನ ಮುತ್ತಿಗಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ