ಹಳೆಯ ಬಾಗಿಲಿನ
ಹಿಡಿಕೆಯಂತಾಗಿದೆ ಮನಸು
ಹೊಸಾ ಬೆಳಕಿಗೆ
ಹಾತೊರೆಯುವಂತಿದೆ ನೆರಳು
ಬಂದು ತೆಗೆಯುತ್ತಿದ್ದರು
ನೊಂದ ಮನಸಿನ ಕೀಲಿ
ಹಿಂದೆ ಸರಿಯಿತ್ತು
ಇಂದು ಬರೀ ತೂತಾಗಿದೆ
ತಾಳಿ ಯೋಚಿಸಿದರೆ
ತೆರೆಯುವುದು ಮನಸಿನ ದಾರಿ
ತೂತಾದರೂ ಸರಿಯೇ
ತೂರಿ ಕತ್ತಲೆ ಓಡಿಸುವಂತೆ ಬೆಳಕು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ