ಬಾಳ ಪಯಣದ ಹಾದಿಯಲ್ಲಿ
ಅಲ್ಲಲಿ ನೂರಾರು ನಿಲ್ದಾಣ,
ನೆನಪುಗಳನ್ನು ಬಿಟ್ಟು ಹೋಗೋ
ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ..
ದೋಣಿ ತೇಲುತಿದೆ ನೀರಿನಮೇಲೆ
ಅಲ್ಲಲ್ಲಿ ಕಲ್ಲು ಮರ ದಿಮ್ಮೆ
ನಿಧಾನವಾಗಿ ದಾಟಿ ಹೋಗೋ
ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ
ಮನಸ್ಸು ಸಾಗುತಿದೆ ಆಸೆಗಳಮೇಲೆ
ಅಲ್ಲಲ್ಲಿ ನೋವು ನಲಿವಿಗೇನು ಕಮ್ಮಿ
ಅನುಭವಗಳ ಹೊತ್ತು ಹೋಗೋ
ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ
ಜೀವನ ಸಾಗುತಿದೆ ಹೊಂದಾಣಿಕೆಮೇಲೆ
ಅಲ್ಲಲ್ಲಿ ಕಲ್ಲು ಮುಳ್ಳುಗಳು ದಾರಿಯಲ್ಲಿ
ಸಂ-ಸಾಗರ ದಾಟೋದಕ್ಕೆ ಹೋಗೋ
ಪಯಣಿಗರ ಜೊತೆಯಲ್ಲಿ ಇಡಬೇಕಿದೆ ಹೆಜ್ಜೆ ನಿಧಾನ !
ಅದುವೇ ಜೀವನಗೆಲ್ಲೊ ಗುಟ್ಟ ತಿಳಿದಿಕೋ ಪ್ರಧಾನ!.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ