ಮಧುರ ಮುಂಜಾನೆಯ
ಬಿರಿದ ತಿಳಿ ಬೆಳಕಲ್ಲಿ
ಚಕ್ರತೀರ್ಥದಿ ನಿಂತಾಗಿದೆ
ಮೌನವೇ ಮಾತಾಗಿದೆ
ನೀನೊಂದು ಬೆಟ್ಟದಲ್ಲಿ
ಅವನೊಂದು ಬೆಟ್ಟದಲ್ಲಿ
ಕಲ್ಲಂತೆ ನಾವು ನಿಂತಾಗಿದೆ
ಕಳೆದ ಸ್ನೇಹ ಹುಡುಕಾಡಿದೆ
ನದಿಯು ಹರಿಯುತಿದೆ
ಬೆಟ್ಟಗಳ ಬುಡ ಸವರಿ
ತೆಪ್ಪ ತೆಪ್ಪಗೆ ನಿಂತಾಗಿದೆ
ಅಲೆಗಳಿಗೂ ರಜೆ ಸಿಕ್ಕಿದೆ
ತಂಗಾಳಿ ಬೀಸುತಲಿ ಮಾತು
ಅಲೆಗಳು ರಾಚುತಲಿ ಪ್ರೀತಿ
ಸ್ನೇಹ ಸೇತುವೆ ನಿಲ್ಲಬೇಕಿದೆ
ಜೀವನ ಪಯಣ ಸಾಗಬೇಕಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ