ಗೂಡು ಕಡೆದರೇನು ಪ್ರಿಯೆ
ನಾಡು ನಮ್ಮದಲ್ಲವೇ
ಬೀಡುಬಿಟ್ಟು ಕಡೆದ ಮರದಿ
ಹಾಡುವ ಬಾ ಮೆಲ್ಲಗೆ
ಇಟ್ಟಿದ್ದ ಕಾಳು ಕಳೆದರೇನು
ಪುಟ್ಟ ಹೊಟ್ಟಿ ತುಂಬದೇ
ದುಷ್ಟ ಜನರಿವರು, ಪ್ರಿಯೆ
ದಟ್ಟಕಾಡು ಇಲ್ಲವೇ
ಕಸಕಡ್ಡಿ ಗೂಡುಕಟ್ಟುವುದೇನು
ಹೊಸದಲ್ಲ ಗೆಲ್ಲುವೆ
ತುಸು ಸಮಯವಾಗಬಹುದು
ಕೊಸರು ಕೊಡಬೇಕೇ ಇಲ್ಲಿಗೆ
ಹಳೆಯ ವಿಷಯ ಆದರೂ ಪ್ರಿಯೆ
ಗೆಳೆಯ ಜೊತೆ ನಾನಿಲ್ಲವೆ
ತಿಳಿ ಬಿಸಿಲು ಹಸಿರು ಸುತ್ತಲಿಹದು
ಸೆಳೆಯುತ್ತಿದೆ ಬಾ, ಹಾರುವ ಅಲ್ಲಿಗೆ
ಒಂದು ಕೆಟ್ಟ ಘಟನೆಯ ಆನಂತರ ಛಿದ್ರವಾದ ಬದುಕಿನ ಸಾತ್ವಿಕ ಅಳಲು ಇಲ್ಲಿದೆ.
ಪ್ರತ್ಯುತ್ತರಅಳಿಸಿಕಟ್ಟಿಕೊಂಡ ಗೂಡು ಕಳೆದ ಮೇಲೆ ಮುಂದಲ ಮನೋ ನಿರ್ಗತಿಕತೆಯ ವೇದನೆಯು ಇಲ್ಲಿ ಅಕ್ಷರಗಳ ಕಂಬನಿಯಾಗಿ ಮೂಡಿದೆ.