ನೋಡಾದಿರಿ ನನ್ನ ನೀಲಿ ಕಣ್ಣುಗಳಿಂದ
ಪ್ರೀತಿ ಸ್ನೇಹ ಮುರಿಯುವ ಭಯವಾಗಿದೆ
ಮೂರೂ ಮನಸ್ಸುಗಳ ಅಂತರ ತ್ರಿಕೋನದಂತೆ
ಮೂರೂ ಕಲ್ಲುತುಂಬಿದ ಬೆಟ್ಟಗಳು ನಿಂತಿವೆ
ಮೂರೂ ತೀರದಿ ಮಧ್ಯ ನದಿಯೊಂದು ಹರಿದಿದೆ
ಮೂರೂ ಹೃದಯ ಬೆಸೆಯಲು ತಪ್ಪ ಬಂದಂತಿದೆ
ಪ್ರೀತಿ ಮೂಡಿತು ನಿನ್ನ ಮೊದಲು ನೋಡಿದ ಆ ಕ್ಷಣ
ಕೃತಿಯಲ್ಲಿ ಅವನ ಸ್ನೇಹ ರಕ್ತದ ಕಣ ಕಣದಲ್ಲಿದೆ
ತಪ್ಪು ತಿಳುವಳಿಕೆ ಬೆಳೆದು ಬೆಟ್ಟವಾಗಿ ನಿಂತಿದೆ
ಒಪ್ಪುವಂದದಿ ಕರಗಿ ಮುನಿಸು ನೀರಾಗಬಾರದೇ
ಮೌನತುಂಬಿದ ಗಾಳಿಯಲ್ಲೂ ಮನಸ್ಸಿನ ತೊಳಲಾಟ
ಅಲೆಗಳಿಲ್ಲದ ನೀರಿನಲ್ಲೂ ಮೂಡಿದೆ ಚಕ್ರತೀರ್ಥ
ನೀರು ಹರಿದಷ್ಟು ಮನಸು ತಿಳಿಯಾಗಬಹುದು ಕಾಯುವೆ
ತೀರಗಳ ಬೆಸೆಯಲು ನಾವು ಸ್ನೇಹ ಸೇತುವೆ ಕಟ್ಟಬಾರದೇ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ