ಆಗೊಮ್ಮೆ ಈಗೊಮ್ಮೆ ಚನ್ನಾಗಿ ಓದುತ್ತಿದ್ದೆ
ನೆನಪಾದಾಗ ದೀಪಾ ಹಚ್ಚಿ
ಓದ್ಮುಗ್ಸಿ ಹಾಳಾಗಿ ಹೋಗೋಣ ಅಂತಿದ್ದೆ
ಹಿಡದಿಟ್ಲು ಹೃದಯ ಚುಚ್ಚಿ
ಹಿಂದೊಮ್ಮೆ ಓಡಿದ್ದೆ ಅವಳ ನೆನಪಾಗಿ
ಕೈ ಮೇಲೆ ಹಚ್ಚೆ ಹಚ್ಚಿ
ಮುಂದೇನೂ ಓಡ್ತೀನಿ ಅನ್ನೋದು ಗೊತ್ತಿಲ್ಲ
ಕಟ್ಟಿದ್ದ ಸರಪಳಿಯನ್ನು ಬಿಚ್ಚಿ
ಹೀಗೊಂದು ಕನಸು ಮೊನ್ನೆ ಮೊನ್ನೆ ಬಿದ್ದಿತ್ತು
ಓಡಿದ್ಲು ಲಚ್ಚಿ ತುಟಿಯ ಕಚ್ಚಿ
ಹಿಡಿಯೋಕೆ ಹೋಗಿದ್ದೆ ಮತ್ತೆದ್ದು ಬಿದ್ದಿದ್ದೆ
ಸೇರಿದ್ದೆ ಸರಪಳಿ ಕೊಂಡಿ ಬಿಚ್ಚಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ