ನಂದಗೋಕುಲದಲ್ಲಿ
ಮಿಂದ ನಮ್ಮ ಮಡಕೆಗಳ
ತಂದು ಜೋಡಿಸಿರುವೆ ನೀ
ಕಂದನಲ್ಲವೋ ಕೃಷ್ಣ
ಬೆಣ್ಣೆ ತುಂಬಿ ತರುತಿದ್ದೆ
ಹಣ್ಣು ಹಾಲು ತುಂಬುತ್ತಿದ್ದೆ
ತಣ್ಣನೆಯ ಮೊಸರು ಮಾರುತಿದ್ದೆ
ಕ್ಷಣದಲ್ಲಿ ಕದ್ದು ತಂದೆ ಕೃಷ್ಣ
ಸುಣ್ಣದಿಂದ ಚಿತ್ರ ಬಿಡಿಸಿ
ಬಣ್ಣ ತುಂಬಿದ ನನ್ನ ಮಡಿಕೆ
ಕಣ್ಣು ಬಿಟ್ಟು ಹುಡುಕಿದರೂ
ಸಣ್ಣ ಕುರುಹು ಇಲ್ಲ ಕೃಷ್ಣ
ಸಭ್ಯನಲ್ಲವೇ ನೀನು
ಲಭ್ಯವಿದ್ದರೆ ನನ್ನ ಮಡಿಕೆ ತೋರು
ಅಭ್ಯಂಜನ ಮಾಡಿಸಿ ಬೆಣ್ಣೆ ಕೊಡುವೆ
ಪ್ರಭಂಜನನಂತೆ ಬಾರೋ ಕೃಷ್ಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ