ತೆಳ್ಳನೆಯ ಚಪ್ಪರದಿ
ಬಳ್ಳಿಯು ತುದಿಯಲ್ಲಿ
ಬೆಳ್ಳನೆಯ ಹೂಗಳ ನೋಡೋ
ಬಾಳೆಂಬ ತೋಟದಲಿ
ಬೆಳೆದೆರೆಡು ಹೂವುಗಳು
ಬಳುಕುತಾ ತಲೆದೂಗಿವೆ ನೋಡೋ
ಅಂಬರದಿ ಸುವಾಸನೆಗೆ
ದುಂಬಿಗಳ ಹಾರುತಿವೆ
ತುಂಬಿದ ಮೊಗವ ನೋಡೋ
ನೈದಿಲೆಯು ನಾಚಿಕೆಗೆ
ಬೈತಲೆಯು ಎರಡಾಗಿ
ಕೈ ಹಿಡಿದ ನಗುವ ನೋಡೋ
ಬಟ್ಟಲು ಗಣ್ಣನು ಬಿಟ್ಟು
ಬೆರಗಾಗಿ ಸುತ್ತ ನೋಡುತ್ತಿವೆ
ಬಳಿಸಾಗಿ ಸೊಬಗ ಸವಿಯಬೇಕು ನಾವು