ಓಡುತ ಮರಳಲಿ ನಲಿಯುತ ಆಡುವ
ಸೂರ್ಯನು ಮುಳುಗುವ ಸಮಯದಲಿ
ಚಿಲಿಪಿಲಿ ಗುಟ್ಟುತ ಕಲರವದಿ ಹರಾಡುವ
ಹಕ್ಕಿಗಳಂತೆ ಮನೆ ಸೇರುವ ಹರುಷದಲಿ
ತಂಪಿನ ತಂಗಾಳಿಗೆ ಚಲಿಸುತ ಬರುವ
ಮೋಡವು ಚಿತ್ತಾರ ಬಿಡಿಸಿದೆ ಅಂಬರದಲ್ಲಿ
ಆಡುತ ಆಡುತ ಕುಣಿಯುವ ಜೊತೆಯಲಿ
ಹೊಳೆಯುವ ಸಂಜೆ ಸೂರ್ಯ ಕಿರಣದಲಿ
ಹೆಡೆಯನು ಎತ್ತಿ ಏರುತ ಇಳಿಯುತ
ಗಾಳಿಪಟ ತೇಲಿದೆ ಹಾರಿದೆ ಮುಗಿಲಲ್ಲಿ
ದಾರವ ಹಿಡಿಯುತ ಓಡುತ ಓಡುತ
ಹಾರಿಸುವೆವು ಹೊಸ ಕನಸು ಆಗಸದಲ್ಲಿ
ದೂರದ ಬೆಟ್ಟ ನಿಂತಿದೆ ಸುಮ್ಮನೇ
ನೋಡುತ ನಮ್ಮನು ವಿಸ್ಮಯದಲ್ಲಿ
ದೂರದ ಸಾಧನೆ ಮಾಡಿಯೇ ತಿರುವೆವು
ಎನ್ನುವ ಸಂದೇಶ ಸಾರುವೆವು ಇರುಳಲ್ಲಿ
ಸಾದೃಶ ಕವನ ಪ್ರಯತ್ನ.
ಪ್ರತ್ಯುತ್ತರಅಳಿಸಿ