ಮಬ್ಬಿನ ಮಂಜು ಮುಂಜಾವಲಿ ಬಂತು
ಇಬ್ಬನಿ ಮಿನುಗಿದೆ ಹಸಿರಲಿ ನಿಂತು
ತಬ್ಬಿ ಭೂಮಿಯ ಉಲ್ಲಾಸದಿ ಬೆರೆತು
ಉಬ್ಬಿಸಿ ಮನಸು ಹೊಸ ಹುರುಪವ ತಂತು
ಕೊನೆ ಇರದಾ ದಾರಿಗೆ ಬೇಲಿಯ ಬಿಗಿದು
ಮನದಲಿ ತುಂಬಿದ ಕೊಳೆಯನು ತೊಳಿದು
ಕಾನನದಂಚಿಗೆ ಕಂಬ ತಂತಿಯ ಎಳೆದು
ಬಾನಿಗೆ ಕಳುಸುವ ಸಂದೇಶವು ಹೊಸದು
ಸ್ವರ್ಗದ ದಾರಿಯು ಹೊಳೆಯುತ ನಿಂತು
ನಿರ್ಭಯ ಲೋಕಕೆ ಕೈಬೀಸಿ ಕರೆಯಿತು
ಸ್ವಾರ್ಥವಿಲ್ಲದೆ ಸಾಧನೆ ಮಾಡಿದವರಿಗೆ
ದುರ್ಗಮವಿಲ್ಲದ ಹೊಸ ದಾರಿ ತೋರಿಸಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ