ನಾಲ್ಕುತಂತಿಯ ಬಿಗಿದು
ರಾಗ ಶ್ರುತಿ ಸರಿಪಡಿಸಿ
ಬಿಲ್ಲುಹಿಡಿದು ನೀ ನುಡಿಸು
ಹೃದಯ ಲಯದ ಜೊತೆಗೆ
ಸುಸ್ವರಗಳನು ಕೊಟ್ಟಿರುವೆ
ಸ್ವಲ್ಪ ಪ್ರೀತಿ ಹರಿ ಬಿಟ್ಟಿರುವೆ
ಮೀಟಿಬಿಡು ಹೃದಯವನು
ಕೊಟ್ಟ ಗುಲಾಬಿ ಹೂ ಜೊತೆಗೆ
ಪಿಟೀಲು ಸ್ವರ ನುಡಿದಂತೆ
ಹೃದಯ ನಿನಾದ ಸೂಸುತಿದೆ
ಕೆಂಗುಲಾಬಿ ದಳಗಳಂತೆ
ರಕ್ತ ಚಲಿಸಿ ಒಳಗೆ ಹೊರಗೆ
ತಾಳಲಾರೆ ಪ್ರೀತಿ ಏರಿಳಿತ
ಬಾಳಲಾರೆವಾ ಕೊನೆತನಕ
ಹಾಳುಮಾದಡಿರು ಈ ತವಕ
ಬಾ ಪೂರ್ಣಚಂದ್ರನ ಜೊತೆಗೆ
ತಥಾಸ್ತು ಎಂದರು ಅಷ್ಟೂ ದೇವಾನುದೇವತೆಗಳು.
ಪ್ರತ್ಯುತ್ತರಅಳಿಸಿ