ಎಲ್ಲಿರುವೆ ನನ್ನ ಚಲುವೆ
ಹೇಗಿರುವೆ ಓ ಒಲವೆ
ಕಣ್ಣು ಕಣ್ಣಲ್ಲಿ ಸೇರಿಸಿ ನಕ್ಕು
ಕಣ್ಣು ಹೊಡೆದು ನನ್ನ ಸೆಳೆದೆ
ಕಣ್ಣು ಕುರುಡಾಗುವ ಮುಂಚೆ
ಕಣ್ಣ ಎದುರಿಗೆ ನೀ ಬಾ ಚಲುವೆ
ನಿನ್ನ ನೋಡಲು ಕಣ್ಣು ದಿನವು ಕಾಯುತಿದೆ
ಕಣ್ಣಲ್ಲಿ ನಿನ್ನಬಿಂಬ ಮೂಡಿಸು ಓ ಒಲವೆ
ಉಸಿರು ಉಸಿರಲ್ಲಿ ನೀನಿರುವೆ
ಉಸಿರು ಏರಿಸುತ ನೀ ನಡೆದೆ
ಉಸಿರು ಕೊನೆಯಾಗುವ ಮುಂಚೆ
ಉಸಿರಲ್ಲಿ ಉಸಿರಾಗು ಬಾ ಚಲುವೆ
ನೀ ಇಲ್ಲದೆ ಉಸಿರು ನಿಂತ ನೀರಾಗಿದೆ
ಉಸಿರ ನೀಡಿ ಪ್ರೀತಿಸು ಓ ಒಲವೆ
ಹೃದಯ ಹೃದಯದಲ್ಲಿ ಸೇರಿಸುತ
ಹೃದಯ ನೋವನ್ನೇ ಮರಿಸಿಬಿಡು
ಹೃದಯ ಬಡಿತ ನಿಲ್ಲುವ ಮುಂಚೆ
ಹೃದಯ ತುಂಬಿತ ಬಾ ಚಲುವೆ
ನೀ ಇಲ್ಲದೆ ಹೃದಯ ತುಂಬಾ ಬರಿದಾಗಿದೆ
ಹೃದಯ ಆವರಿಸಿ ಬದುಕಿಸು ಓ ಒಲವೆ
ಕನಸು ಕನಸಲ್ಲಿ ಬರುತಿರುವೆ
ಕನಸು ಕಟ್ಟಿ ನಾ ಕುಳಿತಿರುವೆ
ಕನಸು ಸರಿದು ಜಾರುವ ಮುಂಚೆ
ಕನಸು ನನಸಾಗಿಸು ಓ ಚಲುವೆ
ನೀ ಇಲ್ಲದಾ ಕನಸು ಎಂದೂ ಬೇಡವಾಗಿದೆ
ಕನಸಲ್ಲೂ ನನಸಲ್ಲು ಜೊತೆ ಬಾ ಒಲವೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ