ಪ್ರೇಮ ಪತ್ರವ ಬರೆದು ಹಾಳೆಯಲಿ ಸುತ್ತಿ
ಪುಸ್ತಕದ ಮಧ್ಯಇಟ್ಟು ಗೊತ್ತಿರದಂತೆ ಮಾಡಿ
ಮಸ್ತಕದಲಿ ನಿಜಪ್ರೀತಿ ತುಂಬಿಕೊಡಿದ್ದಾಗ
ಮೈ ಕೈ ನಡುಗುವುದೇಕೆ?
ಅವಳ ನೋಡಲು ಹಗಲಿರಿಳು ಊರೂರುಸುತ್ತಿ
ಹೊಳೆವ ಕೆಂಗುಲಾಬಿಯ ಗುಚ್ಚವನು ಮಾಡಿ
ಪ್ರೀತಿ ನಿವೇದನೆಗೆ ಮಂಡಿಯೂರಿ ಕುಳಿತಾಗ
ಹೃದಯ ಬಡಿತ ಹೆಚ್ಚಾಗುವುದೇಕೆ?
ಪ್ರೀತಿ ಪ್ರೇಮವೆಂದು ಹೂದೋಟಗಳ ಸುತ್ತಿ
ದಿನ ದಿನವೂ ಗಂಟೆಗಟ್ಟಲೆ ಹರಟೆಯ ಮಾಡಿ
ಮುದ್ದುಗರೆಯಲು ಪ್ರೇಯಸಿ ಜೊತೆ ಇದ್ದಾಗ
ಕಣ್ಣು ಮುಚ್ಚುವುದೇಕೆ?
ಒಳ ಮನಸು ಹೃದಯ ಕಣ್ಣ ಜಾಗೃತ
ಗೊಳಿಸಿ ಸಂಭ್ರಮಿಸಲು ಸಾಕೆ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ