ಎಲ್ಲಿಹುದೋ ಏನ್ತಿಹುದೋ ನಮ್ಮ ಸಂಸ್ಕೃತಿ ಇಂದು
ಮುಂದಾದರು ಒಮ್ಮೆ ಮತ್ತೆ ಮರುಕಳಿಸಬಹುದೋ ?
ಎಳೆದ ರಂಗೋಲಿ ಇಲ್ಲ
ತಳಿರು ತೋರಣ ಹೂ ಬಾಗಿಲಿಗೆ ಕಟ್ಟಿಲ್ಲ
ಹಳೆಯ ಪದ್ದತಿಗಳೆಲ್ಲ ನಿಂತು ಹೋಗಿಹುದಿಲ್ಲಿ
ಚಿತ್ರದಲಿರುವ ಅಮ್ಮನೇ ಬರಬೇಕು ಮತ್ತಿಲ್ಲಿ .
ಗಾಳಿ ಬದಲಾಗಿಲ್ಲ
ನೀರು ಬಣ್ಣಕ್ಕೆ ತಿರುಗಿಲ್ಲ
ಮನೆಮುಂದಿನ ತುಳಿಸಿ ವಾಸನೆ ಬದಲಿಸಿಲ್ಲ
ಎಲ್ಲವನು ಕೆಡೆಸುವ ಮನುಜರೇ ತುಂಬಿಹರಿಲ್ಲಿ
ಕಪ್ಪಾಗುತಿದೆ ಬದುಕು ಮನಸಲೂ ವಿಷ ತುಂಬಿ.
ಬುದ್ದಿ ಹೇಳುವರಿಲ್ಲ
ಹೇಳಿದರೆ ಕೇಳುವರಿಲ್ಲ
ಎಲ್ಲಿಗೆ ಓಡುತ್ತಿದ್ದೇವೆ ಎಂಬದೇ ಗೊತ್ತಿಲ್ಲ
ಪಾಶ್ಚಾತ್ಯರ ಜೀವನಶೈಲಿ ಆವರಿಸಿಹುದಿಲ್ಲಿ
ಬೃಂದಾವನದ ಕೃಷ್ಣನೇ ಮತ್ತೆ ಎದ್ದು ಬರಬೇಕಿಲ್ಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ