ಮಂಗಳವಾರ, ಮೇ 5, 2015

ಸೈಕಲ್ ಮೇಲೆ.

ಬಣ್ಣ ಬಣ್ಣದ ಬಲೂನಲ್ಲಿ 
ಸಣ್ಣ ರಂದ್ರದಿ ಗಾಳಿ ತುಂಬಿ 
ಅಣ್ಣ ಹಿಡಿದು ಹೊರಟಿದ್ದಾನೆ ಸೈಕಲ್ ಮೇಲೆ.

ದುಂಡು ಮೊಗದ ಬಲೂನಲ್ಲಿ 
ಚಂದದ ಕಣ್ಣು ಮೂಗು ಬರೆದು 
ಅಂದ ಹೆಚ್ಹಿಸಿ ಹೊರಟಿದ್ದಾನೆ ಸೈಕಲ್ ಮೇಲೆ 

ಕೆಂಪು ಹಳದಿ ನೀಲಿ ಹಸಿರು 
ತಂಪು ಗಾಳಿ ಒಳಗೆ ಉಸಿರು 
ಗುಂಪು ಕಟ್ಟಿ ಹೊರಟಿದ್ದೇವೆ ಸೈಕಲ್ ಮೇಲೆ 

ಹಗಲು ಸಂಜೆ ಇರುಳಿನಲ್ಲಿ 
ನಗುತ ನಲಿಯುತ ದಾರಿಯಲ್ಲಿ    
ಹೋಗಿ ಕೊನೆಗೆ ಸೇರುವುದೆಲ್ಲೋ ಸೈಕಲ್ ಮೇಲೆ 

ದಡವ ಸೇರಿಸುವ ಮಾಲಿಕನಿಗೆ 
ದುಡಿದು ಕೊಳ್ಳುವ ಗ್ರಾಹಕರಿಗೆ 
ಕೊಡತ ಪ್ರೀತಿ ಸಾಗುವೆವು ನಾವು ಸೈಕಲ್ ಮೇಲೆ 

1 ಕಾಮೆಂಟ್‌:

  1. ಅಪರೂಪಕ್ಕೊಂದು ಶಿಶು ಗೀತೆಯನ್ನು ಓದಿಸಿದ ತಮಗೆ ಶರಣು.
    ಮೊಮ್ಮಗುವಿಗೆ ಬೆಲೂನ್ ಕೊಡಿಸುವ ಕಾಲ ನಿಮಗೆ ಬೇಗ ಬರಲಿ.

    ಪ್ರತ್ಯುತ್ತರಅಳಿಸಿ