ಕಳೆದೊಂದು ವರುಷದ ಹಿಂದೆ
ಬಳಕುವಾ ಬೆಡಗಿಯ ಕಂಡೆ
ಬೆಳೆದು ನಿಂತಾ ಅಭಿಸಾರಿಕೆಯ
ಹೊಳೆವ ಹೂ ಕಂಗಳ ಕಂಡೆ
ಮುದ್ದು ಗರೆಯುವ ಮುಖದಲ್ಲಿ
ತಿದ್ದಿ ತೀಡಿದ ಹುಬ್ಬನು ಕಂಡೆ
ಬಿದ್ದು ಹೋದೆ ಅವಳಿಗೆ ಸೋತು
ಎದ್ದು ಬರುವ ದಾರಿಯು ಹುಡುಕುತಿಹೆ
ಪ್ರೇಮ ನಿವೇದನೆಗೆಂದು ಗುಲಾಬಿ ಹೂವನು ತಂದೆ
ಪ್ರೀತಿ ಪತ್ರವ ಕೊಡಲು ಪದಗಳನು ಹುಡುಕುತಲಿರುವೆ
ಪ್ರತೀ ಪುಟವನ್ನು ತೆರೆದು ಪದಗಳ ಹೆಕ್ಕಿ ತೆಗದೇ
ಪ್ರಭುದ್ದ ಕವನವನು ಗೀಚುತ ಮೈಮೆರೆತುಹೋದೆ
ಒಂದೊಂದು ಸಾಲಿನಲ್ಲಿ ಹೊಸ ಪ್ರೀತಿ ತುಂಬಿಸಿ ಇಟ್ಟೆ
ಚಂದದ ಅರ್ಥಕೆ ಸೋತು ಗುಲಾಬಿ ದಳ ಎಲೆಗಳು ಬಿತ್ತೇ
ಅಂದಗೊಳಿಸಿ ಮುಗಿಸುತಲಿ ಸಮಯ ಬಹಳ ಸರಿದಿತ್ತೆ!
ಇಂದು ಪತ್ರ ಕೊಡುವುದರೊಳಗೆ ಅವಳಿಗೆ ತಾಳಿ ಬಿದ್ದೈತೆ !!!
ಯಾಕಪ್ಪಾ ಕವಿಯೇ ತಡ ಮಾಡಿದೆ!
ಪ್ರತ್ಯುತ್ತರಅಳಿಸಿಮಿಂಚಿ ಹೋಯಿತಲ್ಲಪ್ಪಾ ಸುಗಳಿಗೆ!!