ಕುಟ್ಟಿ ಹಾಕುವೆ ನಾನು ತುಟ್ಟಿ ಯಾಗಿದೆ ಬದುಕು
ಕಟ್ಟಡಗಳು ಏಳುತಿವೆ ನಮ್ಮಗಳ ಚಟ್ಟ ಕಟ್ಟಿ
ಬಿಟ್ಟು ಹೋದರು ಅಪ್ಪ ಅಮ್ಮ ಅರಿಯಲಾರದೆ
ಕಷ್ಟ ಎಸ್ಟೆಎಂದು ವರ್ಣಿಸಲಿ ನಮ್ಮ ಬದುಕು
ಹಗಲಿಲ್ಲ ಇರುಳಿಲ್ಲ ಕುಟ್ಟುವುದು ನಿಂತಿಲ್ಲಾ
ಹೆಗಲ ಮೇಲೆ ಕೂಡಿಸಿ ಓಡಾಡಿಸುವರಿಲ್ಲ
ಹಗಲು ಕನಸಾಗಿದೆ ಆಟ ಅಡುಬೇಕೆಂಬುದು
ಹೋಗಲು ಬಿಡಲೊಲ್ಲರು ನಾನು ಜೀತದಾಳು
ಜಾರಿಹೋಗಿದೆ ಜೀವ ಹೇಳಿ ಕೆಳುವವರಾರಿಲ್ಲ
ಹರಿದ ಛತ್ರಿಯಾಗಿದೆ ತೊರೆದ ನಮ್ಮ ಬದುಕು
ಉರಿದು ಹೋಗಿದೆ ಜೀವ ಉರಿವ ಬಿಸಿಲಲ್ಲಿ
ಬರಿದಾಗಿದೆ ಬದುಕು ಈ ಬೋಕಿ ಬಿಲ್ಲಿಯಂತೆ
ಹೊತ್ತು ಮುಳುಗದಿರಲಿ ರಾತ್ರಿ ಉಳಿಯುವುದೆಲ್ಲಿ
ತುತ್ತು ಇಡುವವರಿಲ್ಲ ಅಳಲು ಸಮಯಬಾರದಿರಲಿ
ಗೊತ್ತಿಲ್ಲ ಬಾಲಕಾರ್ಮಿಕ ಇಲಾಖೆ ಇರುವುದೆಲ್ಲಿ
ಇತ್ತಾದರೂ ಬವಣೆಬಿದಿಸುವರೇ? ಬೆಳಕು ಚಲ್ಲಿ ?
ಬಾಲ್ಯವನು ಮೊರಟಿ ಹಾಕುವ ಬಡತನಕೆ ಧಿಕ್ಕಾರ!
ಪ್ರತ್ಯುತ್ತರಅಳಿಸಿಪುಟ್ಟ ಮನಸುಗಳು ಶಿಕ್ಷಣ, ಕ್ರೀಡೆ ಮತ್ತು ಕನಿಷ್ಟ ಸೌಲಭ್ಯಗಳಿಂದ ವಂಚಿತವಾಗುವ ದುರಂತಕ್ಕೆ ಅಂತ್ಯವೆಂದು?