ಬೇಸಿಗೆ ಬಂದಿದೆ ಮರ ಗಿಡ ಒಣಗಿದೆ
ಕಟ್ಟಿದ ಗೂಡು ಎಲ್ಲರಿಗೂ ಕಾಣುತಿದೆ
ಇಟ್ಟರೆ ಮೊಟ್ಟೆ ಕುಕ್ಕದೆ ಬಿಡುವರೇ
ಬದ್ದ ವೈರಿಗಳು ದಿನ ಕಾಯುತಿವೆ
ಕಡು ಬೇಸಿಗೆಯಲಿ ಸುಡುತಿದೆ ಬಿಸಿಲು
ಮರೆ ಮಾಚಲು ನೆರಳಿನ ಜಾಗ ಸಿಗದೇ
ಕಟ್ಟಡದಡವಿಯಲು ದಟ್ಟಡವಿಯಲು
ತಂಪಿರುವ ಜಾಗವ ಹುಡುಕುತಿಹೆ
ಕಲ್ಲಿನ ಮಂಟಪದ ಮೂಲೆಯಲೊಂದು
ಚಲ್ವಿನ ಪೊಟರೆಯು ಕೈಬೀಸಿ ಕರೆಯುತಿದೆ
ಹುಲ್ಲನು ಹುಡುಕಿ ಹೊಸ ಗೂಡನು ಕಟ್ಟದೇ
ಮೆಲ್ಲಗೆ ಒಳಗೆ ಸೇರಲು ಕಾಯುತಿಹೆ !!
ದಲ್ಲಾಳಿ ಇಲ್ಲದೆ ಹುಡುಕಿದ ಮನೆಗೆ
ನಲ್ಲೆಯ ಜೊತೆ ಮರಿಗಳ ಕರೆತರುವೆ
ಗಲ್ಲವ ತಿರುಗಿಸಿ ಚಿಂವ್ ಚಿಂವ್ ಹಾಡಿ
ಎಲ್ಲರ ಮೃದು ಮನಸಿಗೆ ಮುದಕೊದುವೆ
ಚಿತ್ರಕವನ ಅದರ ಚೌಕಟ್ಟಿನಾಚೆಗೂ ಚಿತ್ರವನ್ನು ಕಟ್ಟಿಕೊಡುವಂತಿದೆ.
ಪ್ರತ್ಯುತ್ತರಅಳಿಸಿ