ಶನಿವಾರ, ಮಾರ್ಚ್ 28, 2015

ರಾಮಾಯಣ

ಗಜವದನನ ಪಾದಾಂಬುಜಕೆರಗಿ  ಪೇಳುವೆ 
ನಿಜ ಗುಣನಿಲಯನ  ಕಥೆಯ
ತ್ರಿಜಗ ವಂದಿತ ರಘುರಾಮರ ಅನುದಿನ 
ಭಜಿಪ ಹಡಗಲಿ ಹನುಮನ ನೆನೆಯುತಲಿ  

ಋಷಿಶ್ರುಂಗರೊಡನೆ ಸರೆಯು ನದಿದಡದಲ್ಲಿ 
ಧಶರಥ ಪುತ್ರಕಾಮೇಷ್ಥಿ ಯಾಗ ಮಾಡುತಲಿ 
ವಿಶೇಷ ಪಾಯಿಸ ಬರಲು ಹಂಚಿದ ರಾಜ      
ಕೌಶಲ್ಯ, ಸುಮಿತ್ರ  ಕೈಕೆಯೇಯಾರಲ್ಲಿ 

ಹೊಳೆವ ಶುದ್ದನವಮಿ ಕೌಸಲ್ಯಯಲಿ ಶ್ರೀರಾಮ
ಉಳಿದವರಲ್ಲಿ ಲಕ್ಷ್ಮಣ ಭರತ ಶತ್ರುಗ್ನ ಜನಿಸಿದರು 
ಹೊರಟರು ಯಜ್ಞ ರಕ್ಷಸಲು ವಿಶ್ವಾಮಿತ್ರರ ಸಹಿತ 
ಶ್ರೀರಾಮ ಲಕ್ಷ್ಮಣರು  ವಷಿಸ್ಥರ ಅಪೇಕ್ಷೆಯಂತೆ

ತಾಟಕ ವಧಿಸಿ  ಸುಬಾಹುವನೆ ಕೊಂದು 
ರಕ್ಕಸ  ಮಾರೀಚನ ಹೊಡೆದೊಡಿಸಿದರು   
ಗಂಗಾ ತಟದಲ್ಲಿ ಅಹಲ್ಯಾಯ ಹೆಣ್ನಾಗಿಸಿ 
ಮುಂದೆ ನಡೆದರು  ಜನಕರಾಜನಾಸ್ಥಾನಕೆ 

ಮುರಿದು ಶಿವ ಧನಸ್ಸನ್ನು ಎತ್ತಿ  ಆಯಾಸವಿಲ್ಲದೆ 
ವರಸಿದ ಸುಂದರಿ ಜಾನಕಿಯ ಸ್ವಯಂವರದಿ  
ಪರಶುರಾಮರ ಯುದ್ದದ ವಿಡಂಬನೆಯಮಾಡಿ    
ತರಿದು ಅತುಲನ ತುಳಿದು ಅಯೋಧ್ಯ ಸೇರಿದಾರು    

ಕರೆದನು ದಶರಥ ಮಂತ್ರಿ ಸುಮಂತ್ರರನ್ನು 
ಶ್ರೀರಾಮರ ಯುವ ಪಟ್ಟ ಕಟ್ಟಲು ನಿರ್ಧರಿಸುತಲಿ 
ಕೇಳಿ ಮಂಥರೆ ಮಾತು  ಕೈಕೆಯು ವರಬೇಡಿ 
ಕಳೆಸಿದಾರು ಶ್ರೀ ಸೀತಾರಾಮ ಲಕ್ಷಣರ ಅಡವಿಗೆ 

ಕಾಂತಿಇಂದ ಹೊಳೆವೋ ಸುಂದರ ವನದಲ್ಲಿ   
ಜಿಂಕೆ ಮೊಲ ಮೃಗಗಳು ಸೇವೆ ಮಾಡುತಿರಲು 
ಬಂದು ಲಂಕಿಣಿ ಮದುವೆ ಮಾಡಿಕೊ ಎನ್ನಲು ಅ_
ಹಂಕಾರದ ಕಿವಿ ಮೂಗು ಕತ್ತರಿಸಿ ಕಳುಹಿಸಿದನು 

ಹರಿವ ಗೋದಾವರಿ ತಟದ ಪಂಚವಟಿಯಲ್ಲಿ 
ತರಿದು ನಿಗ್ರಹಿಸಿದನು ಅನೇಕ ರಾಕ್ಷಸರ   
ಬಂದು ಶಬರಿಗೆ  ದರುಶನವಿತ್ತು  ಕೊಟ್ಟ 
ಎಂಜಲು ಬಾರೆ ಹಣ್ಣು ತಿಂದು ಹರಸಿದನು 

ಚಲುವ ಮಾಯಾ ಜಿಂಕೆಗೆ ಬೇಕೆನಲು  ಸೀತಾ 
ಬಿಲ್ಲು ಹಿಡಿದು  ಹೋದರು ರಾಮ ಲಕ್ಷ್ಮಣರು 
ಲಕ್ಷ್ಮಣ ಗೆರೆಯಾ ದಾಟಿ ಭಿಕ್ಷೆ ಕೇಳಿದ ರಾವಣ  
ತಕ್ಷಣ ಅಪಹರಿಸಿ  ಹೊತ್ತು ಲಂಕೆಗೆ ನೆಡೆದಾನು 

ಪುಷ್ಪಕ ವಿಮಾನವ  ಮಾರ್ಗ ಮಧ್ಯ  ತಡೆದ 
ಪಕ್ಷಿ ಜಟಾಯು  ಕಳೆದು ಕೊಂಡ ಪಕ್ಕೆ ರೆಕ್ಕೆಗಳ 
ಕಿಷ್ಕಿಂದ ಪರ್ವತ ದಾಟಿ ಚಲಿಸಲು ವಿಮಾನ 
ವಿಷಯ ತಿಳಿಸಲು ಸೀತಾ ಸೆರಗ ಚಲ್ಲಿದಾಳು  

ಸೀತೆಯ ಹುಡುಕುತ ಬಂದ ರಾಮ ಲಕ್ಷಮನರು 
ಕೋತಿಗಳ ಕಂಡರು ತುಂಗಭದ್ರ ತೀರದಲ್ಲಿ 
ವಾಲೀಯ ವಧಿಸಿ  ಸುಗ್ರೀವನ ಅನುಗ್ರಹಿಸಿ 
ನೆಲಸಿ ಕಿಷ್ಕಿಂದಯಲಿ ವಾನರಸೇನೆ ಕಟ್ಟಿದರು 

ಉಂಗುರ ಹಿಡಿದು ಸಮುದ್ರ ಲಂಘನ ಮಾಡಿ 
ಲಂಕೆಯ ಅಶೋಕವಕೆ  ಹನುಮಂತ ಸೇರಿದನು 
ಜಾನಕಿಗೆ ಮುದ್ರಿಕೆ ಕೊಟ್ಟು ಚೂಡಾಮಣಿ ಪಡೆದು 
ಲಂಕಾಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದನು 

ಶರಣಾದ ವಿಭಿಷಣನ ವಾನರ ಸೈನ್ಯ  ಸಹಿತ 
ರುದ್ರನನು ಪೂಜಿಸಿ ಸೇತುವನ್ನು ಕಟ್ಟಿದರು 
ನಿದ್ರೆಇಂದೆದ್ದ  ಕುಂಭಕರ್ಣ, ಇಂದ್ರಜಿತುವನ್ನು 
ಧರೆಗೆ ಉರುಳಿಸಿದನು ಯುದ್ದದಿ ದಶಕಂಠನ

ಶ್ರೀರಾಮ ಸೀತಾ  ಲಕ್ಷ್ಮಣ ಸಹಿತಾನಾಗಿ 
ಮಾರುತಿ  ಭುಜವೆರಿ ಅಯೋಧ್ಯ ಸೇರಿದನು 
ತನ್ನ ಬಾಹುಗಳಿಂದ ಅಭಿಮಾನದಿಂದ ಕರೆದು 
ಹನುಮಂತನಿಗೆ ಆಲಿಂಗನನು ನೀಡಿದಾನು 

ಸಭೆಯಲ್ಲಿ ಶ್ರೀ ರಾಮರ ಪಟ್ಟಾಭಿಷೇಕ ನಡೆಯಲು 
ಸಭಿಕರು ಪಾರಾಕು ಘೋಷಣೆಗಳು ಮೊಳಗಿಸಿದರು 
ದೇವ ದೇವನ ಕಂಡು ಜನರು ಮಂತ್ರಿ ಮಾಘದರು, 
ದೇವತೆಗಳೇ ಬಂದು ಪುಷ್ಪ ವೃಷ್ಟಿ ಸುರಿಸಿದಾರು   

ಈ ಚರಿತೆಯ ಹೇಳಿ ಕೇಳಿದವರಿಗೆ ವರವೀವ 
ಪ್ರಭಂಜನನ  ಹೃದಯೇಶ್ವರ  ಶ್ರೀ ರಾಮ  
ಧನ ಧನ್ಯ ವಿದ್ಯೆ  ಸಂತಾನ ಸುಭಿಕ್ಷವು 
ಅನುಗ್ರಹಿಸಿ ಇಡುವನು  ಮುಕ್ತಿ ಮಾರ್ಗದಲಿ 

1 ಕಾಮೆಂಟ್‌:

  1. ಪ್ರಭಂಜನನ ಹೃದಯೇಶ್ವರ ಶ್ರೀ ರಾಮ ಮತ್ತು ಹಡಗಲಿ ಹನುಮನ ಅನುಗ್ರಹ ನಮಗೂ ನಿಮಗೂ ಅನುಗ್ರಹ ನೀಡಲಿ.

    ನಿಮ್ಮ ಈ ಸಂಪೂರ್ಣ ರಾಮಾಯಣದ ಕಾವ್ಯಾತ್ಮಕ ಪ್ರಸ್ತುತಿ ಸರಳ, ಸುಲಭ ಜೀರ್ಣ ಮತ್ತು ಸವಿವರ.

    ಸುಂದರ ಸಾಲುಗಳೆಲ್ಲ, ಇಲ್ಲೆರಡು ತೋಮಾಲೆ:
    'ಪರಶುರಾಮರ ಯುದ್ದದ ವಿಡಂಬನೆಯಮಾಡಿ
    ತರಿದು ಅತುಲನ ತುಳಿದು ಅಯೋಧ್ಯ ಸೇರಿದರು'

    ಪ್ರತ್ಯುತ್ತರಅಳಿಸಿ